ಬಂಟ್ವಾಳ,ಜು. 03 (DaijiworldNews/AK): ಶಿಕ್ಷಕ ಬಂಟ್ವಾಳ ಚಂದ್ರಶೇಖರ್ ಪೈ ದತ್ತಿನಿಧಿಯಿಂದ ಕೊಡಮಾಡುವ ಕಲಾಶ್ರೀ ಪ್ರಶಸ್ತಿಗೆ ಕಟೀಲು ಮೇಳದ ಕಲಾವಿದ, ಮೂಡುಬಿದರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಆಯ್ಕೆಯಾಗಿದ್ದಾರೆ.

ಕಲೆ ,ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ನೀಡುವ ಈ ಪ್ರಶಸ್ತಿಗೆ ಈ ವರ್ಷ ವಾದಿರಾಜ ಕಲ್ಲೂರಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಪೈ ಅವರು ತಿಳಿಸಿದ್ದಾರೆ.
ಪ್ರಶಸ್ತಿಯು ಆಗಸ್ಟ್ ೨ರಂದು ಮುಂಬೈಯಲ್ಲಿ ಪ್ರದಾನವಾಗಲಿದೆ.