ಬಂಟ್ವಾಳ, ಜು. 04 (DaijiworldNews/TA): ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ನ್ಯಾಯಕ್ಕಾಗಿ ದ.ಕ. ಜಿಲ್ಲಾಧಿಕಾರಿಗಳು, ಎಸ್ಪಿಯವರು ಹಾಗೂ ಬಂಟ್ವಾಳ ನಗರ ಇನ್ಸ್ಪೆಕ್ಟರ್ ಅವರ ಮೂಲಕ ಡಿವೈಎಸ್ಪಿಯವರಿಗೆ ಮನವಿ ನೀಡಿದ್ದಾರೆ.



ಜತೆಗೆ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಸಂಸದರ ಮೂಲಕ ಮನವಿ ನೀಡಿ ಸಂತ್ರಸ್ತ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಭಿನ್ನವಿಸಿದ್ದಾರೆ. ರೈತರ ಹಿತರಕ್ಷಣಾ ಸಂಘ ಸರಪಾಡಿ ವಲಯದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರ ನೇತೃತ್ವದಲ್ಲಿ ರೈತರು ಅಧಿಕಾರಿಗಳನ್ನು ಭೇಟಿಯಾಗಿ ವಿಶ್ವಾಸದಿಂದ ನಡೆಯುತ್ತಿದ್ದ ವ್ಯವಹಾರವನ್ನು ದುರುಪಯೋಗ ಪಡಿಸಿರುವ ಆತ ಸುಮಾರು 70ಕ್ಕೂ ಅಧಿಕ ಬೆಳೆಗಾರರಿಗೆ ವಂಚಿಸಿದ್ದು, ಅದರ ಮೊತ್ತ 10 ಕೋ.ರೂ.ದಾಟಿರುವ ಸಾಧ್ಯತೆ ಇದೆ. ಹೀಗಾಗಿ ಆತನನ್ನು ಪತ್ತೆ ಮಾಡಿ ವಿಚಾರಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಲಾಗಿದೆ.