ಉಳ್ಳಾಲ, ಜು. 04 (DaijiworldNews/AA): ಪ್ರಸಿದ್ಧ ಬಾಡಿಬಿಲ್ಡರ್ ಹಾಗೂ ಭಾರತ್ ಕಿಶೋರ್ ಟೈಟಲ್ ವಿಜೇತ, ರೈಲ್ವೇ ಉದ್ಯೋಗಿ ಸಂತೋಷ್ ಕುಮಾರ್ ಉಳ್ಳಾಲ (52) ಅವರು ಗುರುವಾರ ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಳ್ಳಾಲದ ಜಲ್ಲಿಗುಡ್ಡೆಯ ನಿವಾಸಿಯಾಗಿದ್ದ ಸಂತೋಷ್ ಕುಮಾರ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಉಳ್ಳಾಲದ ಉಳಿಯಾ ಗ್ರಾಮದವರಾದ ಸಂತೋಷ್ ಕುಮಾರ್ ಅವರು, ತೊಕ್ಕೊಟ್ಟುವಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದಿದ್ದರು. ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಕರ್ನಾಟಕ ಉದಯ್ ಮತ್ತು ಭಾರತ್ ಕಿಶೋರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು.
ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದ ಅವರು ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಇಲಾಖೆಯನ್ನು ಪ್ರತಿನಿಧಿಸಿದ್ದರು. ಅವರು ಭಾರತೀಯ ರೈಲ್ವೆಯ ಮಂಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಹೋದ್ಯೋಗಿಯೊಂದಿಗೆ ಸಭೆಗೆ ಹಾಜರಾಗಲು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾಗ ಅವರಿಗೆ ಹೃದಯಾಘಾತ ಸಂಭವಿಸಿದೆ.
ಸಂತೋಷ್ ಅವರು ಹಲವಾರು ಸಾಮಾಜಿಕ ಮತ್ತು ಸಮುದಾಯ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.