ಮಂಜೇಶ್ವರ, ಜು. 11 (DaijiworldNews/AK):ಹಾಡಹಗಲೇ ಮನೆಗೆ ನುಗ್ಗಿ ಎರಡೂವರೆ ಪವನ್ ಚಿನ್ನಾಭರಣ ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಮೂಲದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಗಣಪತ್ ( 28) ಬಂಧಿತ ಆರೋಪಿ. ಮಂಜೇಶ್ವರ ಕಣ್ವತೀರ್ಥದ ದಲ್ಲಿ ಎರಡು ದಿನಗಳ ಹಿಂದೆ ಕಳವು ನಡೆದಿತ್ತು. ಬಾಡಿಗೆ ಮನೆಯಲ್ಲಿ ಉತ್ತರಪ್ರದೇಶದ ಮೂಲದ ಕೂಲಿ ಕಾರ್ಮಿಕ ಲೋಕೇಶ್ ರವರ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿತ್ತು . ಬುಧವಾರದಂದು ಲೋಕೇಶ್ ಹಾಗೂ ಮನೆಯವರು ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿತ್ತು. ಕಿಟಿಕಿ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಕಳವು ಮಾಡಲಾಗಿತ್ತು .
ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸಿ ಬೆರಳಚ್ಚು ತಜ್ಞರು ಮಾಹಿತಿ ಕಲೆಹಾಕಿದ್ದರು. ಗಣಪತ್ ಬಗ್ಗೆ ಸಂಶಯಗೊಂಡ ಪೊಲೀಸರು ವಶಕ್ಕೆ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ .