ಮಂಗಳೂರು, ಜು. 19 (DaijiworldNews/AA): ಪ್ರಕರಣವೊಂದರಲ್ಲಿ ದೋಷಿಯಾಗಿರುವ ಆರೋಪಿಗೆ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದರೂ ಶರಣಾಗದ ಹಿನ್ನೆಲೆ ಅಪರಾಧಿ ವಿರುದ್ಧ ಕೋರ್ಟ್ ಜೈಲು ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ.

ಮೂಲ್ಕಿ ಗೇರುಕಟ್ಟೆ ಕಿಲ್ಪಾಡಿ ನಿವಾಸಿ ಮಹಮ್ಮದ್ ಇರ್ಫಾನ್ (35) ಎಂಬಾತನಿಗೆ ನ್ಯಾಯಾಲಯವು ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ 80,000 ರೂ. ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿಗೆ ಈಗಾಗಲೇ ತೀರ್ಪು ಪ್ರಕಟವಾಗಿದ್ದು, ಆದರೆ ನ್ಯಾಯಾಲಯದ ಆದೇಶವನ್ನು ಅನುಸರಿಸದೇ ಇರುವ ಹಿನ್ನೆಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ನ್ಯಾಯಮೂರ್ತಿಯವರ ಆದೇಶದ ಮೇರೆಗೆ ಆರೋಪಿಯನ್ನು ಮಂಗಳೂರು ಕೇಂದ್ರ ಕಾರಾಗೃಹಕ್ಕೆ ದಾಖಲಿಸಿದ್ದಾರೆ.