ಮಂಗಳೂರು, ಜು. 19 (DaijiworldNews/AA): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ 2024-25ನೇ ಸಾಲಿನ ನೂತನ ಆಡಳಿತ ಕಮೀಟಿ ಆಯ್ಕೆ ಮಾಡಲಾಯಿತು.



ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಸಭಾಂಗಣದಲ್ಲಿ ನೆರವೇರಿತು.
ಸಭೆಯನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಅ ಮೂಲಕ ಉದ್ಘಾಟಿಸಿದರು.
ಸಭಾಧ್ಯಕ್ಷರಾಗಿ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಮೂಸ, ಅಧ್ಯಕ್ಷತೆಯನ್ನು ಮೈಯ್ಯದ್ದಿ ವಹಿಸಿದ್ದರು. ಸಭೆಯಲ್ಲಿ ಮಸೀದಿಯ 2024-25 ನೇ ವಾರ್ಷಿಕ ವರದಿ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಜಮಾಲುದ್ದೀನ್, ಜೊತೆ ಕಾರ್ಯದರ್ಶಿ ಆರೀಫ್ ಮಂಡಿಸಿದರು.
ಬಳಿಕ ಈ ಹಿಂದಿನ ಆಡಳಿತ ಮಂಡಳಿಯನ್ನು ಬರ್ಕಸ್ತುಗೊಳಿಸಿ ನೂತನ ಆಡಳಿತ ಕಮೀಟಿ ಆಯ್ಕೆ ಮಾಡಲಾಯಿತು. ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ನೂತನ ಅಧ್ಯಕ್ಷರಾಗಿ ಎ.ಪಿ ಇಕ್ಬಾಲ್, ಉಪಾಧ್ಯಕ್ಷರಾಗಿ ರಝಾಕ್ ಎ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಸಾಜುದ್ದೀನ್, ಜೊತೆ ಕಾರ್ಯದರ್ಶಿ ಮಹಮ್ಮದ್ ಆರೀಫ್, ಕೋಶಾಧಿಕಾರಿಯಾಗಿ ಇಮ್ರಾನ್ ಅಲಿ, ಸದಸ್ಯರಾಗಿ ಅಬ್ದುಲ್ ರಝಾಕ್, ಅಕ್ಬರ್, ಮನ್ಸೂರ್, ಮಹಮ್ಮದ್ ಮುಸ್ತಾಕ್, ಅಥಾವುಲ್ಲ, ಇಕ್ಬಾಲ್, ಮಹಮ್ಮದ್ ಅನೀಶ್, ಹನೀಫ್ ಕಲಾಯಿ, ಅಹಮ್ಮದ್ ಬಾವ ಅವರನ್ನು ಆಯ್ಕೆ ಮಾಡಲಾಯಿತು.