ಮಂಗಳೂರು, ಜು. 19 (DaijiworldNews/TA): ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಆರೋಪದಲ್ಲಿ ಮಂಗಳೂರಿನ ಮೂರು ಹಾಗೂ ದೇರಳಕಟ್ಟೆಯ ಒಂದು ಖಾಸಗಿ ಕ್ಲಿನಿಕ್ಗಳ ಮೇಲೆ ದ.ಕ.ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿದೆ.





ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್ (ಕೆಪಿಎಂಇ) ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಿಗೆ ನವೀಕರಿಸದ, ಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ದೇರಳಕಟ್ಟೆ ಮತ್ತು ಮಂಗಳೂರಿನ ವಿವಿಧೆಡೆಯ ಮೂರು ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ ಬೀಗ ಜಡಿಯಲಾಯಿತು.
ನಾವು ಈ ಹಿಂದೆಯೇ ಪರಿಶೀಲನೆ ನಡೆಸಿ ಪರವಾನಿಗೆ ನವೀಕರಣ ಸಹಿತ ದಾಖಲೆಪತ್ರ ಸಮರ್ಪಕವಾ ಗಿಡಲು ಸೂಚಿಸಿದ್ದೆವು. ಅಲ್ಲದೆ ಪರವಾನಿಗೆ ನವೀಕರಿಸುವವರೆಗೆ ಕ್ಲಿನಿಕ್ ಮುಚ್ಚುವಂತೆ ತಿಳಿಸಿದ್ದೆವು. ಅದನ್ನು ಉಲ್ಲಂಘಿಸಿ ಬಾಗಿಲು ತೆರೆದ ಕಾರಣ ಇಂದು ದಾಳಿ ಮಾಡಿ ಕ್ರಮ ಜರುಗಿಸಿದ್ದೇವೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.