ಬಂಟ್ವಾಳ, ಜು. 21 (DaijiworldNews/AK):ಸಮಾಜದಲ್ಲಿ ಸಂಘಟನೆಯಿಂದ ಬಲಿಷ್ಠ ರಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಿದೆ ಎಂದು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಹೇಳಿದರು.

ಇಲ್ಲಿನ ಕಲ್ಕಡ್ಕದಲ್ಲಿ ಭಾನುವಾರ ನಡೆದ ವಲಯ ಗಾಣಿಗರ ಸೇವಾ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಹಿರಿಯ ಸಮಾಜ ಸೇವಕ ಡೊಂಬಯ ಟೈಲರ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಸಹಕಾರಿ ಲಿಂಗಪ್ಪ ಕರ್ಕೇರ, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ನರ್ಸಪ್ಪ ಅಮೀನ್, ಕೋಶಾಧಿಕಾರಿ ವೇದವ ಗಾಣಿಗ, ಕರಾವಳಿ ಕ್ರೆಡಿಟ್ ಸೊಸೈಟಿ ನಿರ್ದೇಶಕ ನಾಗೇಶ ಪಾಣೆಮಂಗಳೂರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಂಜಿನಿ, ಪ್ರಮುಖರಾದ ಬಾಲಕೃಷ್ಣ ಮಾಸ್ಟರ್, ಭುವನೇಶ್ ಮೊಗರ್ನಾಡ್, ಜಗದೀಶ್ ಕುಂದರ್, ಪರಮೇಶ್ವರ ಸಪಲ್ಯ ನಡುಗೋಡು, ಬಾಬು ಸಪಲ್ಯ ಬಾಳ್ತಿಲ, ಮೋಹನ ಸಪಲ್ಯ ಕಾಂಪ್ರಬೈಲು, ಲಿಂಗಪ್ಪ ಕರ್ಕೇರ, ನಾರಾಯಣ ಬೋಳಂತೂರು ಮತ್ತಿತರರು ಇದ್ದರು.
ಇದೇ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಸ್ವಾಗತಿಸಿ, ತಿಲಕ್ ಕಲ್ಲಡ್ಕ ವಂದಿಸಿದರು. ಅನುಷಾ ಮತ್ತು ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.