ಮಂಗಳೂರು, ಆ. 04 (DaijiworldNews/AA): ವಿಕೆ ಗ್ರೂಪ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆನ್ ಲೈನ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಆಯೋಜಿಸಲಾಗಿದೆ. ಮಕ್ಕಳ ಪ್ರತಿಭೆ ಮತ್ತು ಬುದ್ಧಿವಂತಿಕೆಯ ಪ್ರದರ್ಶಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಯಲಿದೆ.

ಈ ಬಾರಿ 4ನೇ ವರ್ಷ ಫ್ಯಾನ್ಸಿ ಡ್ರೆಸ್ ಕ್ವಾಂಪಿಟೇಷನ್ ನಡೆಸಲಾಗುತ್ತಿದ್ದು, ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರನಂತೆ ಬಟ್ಟೆ ಧರಿಸಿ, ಇತ್ತೀಚಿನ ಫೋಟೋ ಮತ್ತು ವಿಡಿಯೋವನ್ನ ಕಳುಹಿಸಬೇಕಾಗಿದೆ. ಇನ್ನೂ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಕಿಡ್ಸ್, ಸಬ್ ಜ್ಯೂನಿಯರ್, ಜ್ಯೂನಿಯರ್ ಎಂಬುದಾಗಿ ವಿಂಗಡಿಸಲಾಗಿದೆ.
ಕಿಡ್ಸ್ ವಿಭಾಗದಲ್ಲಿ 2ರಿಂದ 5 ವರ್ಷದ ಮಗುವಿಗೆ ಫೋಟೋ ಕಳುಹಿಸಬೇಕು. ಇದರಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ಸ್ಟಡಿ ಟೇಬಲ್, ದ್ವಿತೀಯ ಬಹುಮಾನ ಪಿಯೋನಾ ಕೀಬೋರ್ಡ್, ತೃತೀಯ ಬಹುಮಾನ ಬುಕ್ ಶೆಲ್ಫ್ ಸಿಗಲಿದೆ. ವಿಜೇತರಿಗೆ ಬಹುಮಾನ ಜೊತೆಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಲಾಗುತ್ತದೆ.
ಇನ್ನು ಸಬ್ ಜ್ಯೂನಿಯರ್ ವಿಭಾಗದ 6ರಿಂದ10 ವರ್ಷದ ಮಕ್ಕಳು ದೇಶ ಭಕ್ತಿ ಗೀತೆಯೊಂದಿಗೆ ವೀಡಿಯೋ ಕಳುಹಿಸಬೇಕಾಗಿದೆ. ಮೊದಲ ಬಹುಮಾನ ಬೈಸಿಕಲ್, ದ್ವಿತೀಯ ಬಹುಮಾನ ಸ್ಟಡಿ ಟೇಬಲ್ ಜೊತೆಗೆ ಬುಕ್ ಶೆಲ್ಫ್, ತೃತೀಯ ಬಹುಮಾನವಾಗಿ ಬುಕ್ ಶೆಲ್ಫ್ ಸಿಗಲಿದೆ. ಇದರಲ್ಲಿ ವಿಜೇತರಾದವರಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಲಾಗುತ್ತದೆ.
ಇನ್ನು ಜೂನಿಯರ್ ವಿಭಾಗದ 11ರಿಂದ 14 ವರ್ಷದ ಮಕ್ಕಳಿಗಾಗಿ ದೇಶ ಭಕ್ತಿಯ ಭಾಷಣದೊಂದಿಗೆ ವಿಡಿಯೋ ಕಳುಹಿಸಬೇಕಾಗಿದೆ. ಇದರಲ್ಲಿ ವಿಜೇತ ಮಕ್ಕಳಿಗೆ ಮೊದಲ ಬಹುಮಾನ ಬೈಸಿಕಲ್, ದ್ವಿತೀಯ ಬಹುಮಾನ ಸ್ಟಡಿ ಟೇಬಲ್ ಹಾಗೂ ತೃತೀಯ ಬಹುಮಾನವಾಗಿ ಬುಕ್ ಶೆಲ್ಫ್ ಸಿಗಲಿದೆ.ಇದರಲ್ಲಿ ವಿಜೇತರಾದವರಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು.
ಪ್ರತಿ ವಿಭಾಗದಲ್ಲಿ 5 ಅತ್ಯುತ್ತಮ ಪ್ರದರ್ಶನ ಬಹುಮಾನ ಕೂಡ ಇರಲಿದೆ. ಭಾಗವಹಿಸುವ ಮಗುವಿನ 2 ಫೋಟೋ ಮತ್ತು 1 ಪ್ರದರ್ಶನದ ವಿಡಿಯೋವನ್ನು 8748800666, 7349299174 ಹಾಗೂ 7026637705ಗೆ ವಾಟ್ಸಾಪ್ ಮಾಡಬೇಕು.
ಮಗುವಿನ ಹೆಸರು, ವಯಸ್ಸು ಮತ್ತು ಹುಟ್ಟಿದ ದಿನಾಂಕ(ಪುರಾವೆ) ವಿಳಾಸ, ಮೊಬೈಲ್ ಸಂಖ್ಯೆ, ಶಾಲೆಯ ಹೆಸರು, ತರಗತಿ ಮತ್ತು ಸ್ಥಳದೊಂದಿಗೆ vkwebmail123@gmail.com ಗೆ ಇಮೇಲ್ ಮಾಡಬೇಕು.
ಇನ್ನೂ ಭಾಷಣ, ಹಾಡನ್ನು ಇಂಗ್ಲಿಷ್, ಹಿಂದಿ, ಮತ್ತು ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ.
ಹಾಡು ಕನಿಷ್ಠ 3 ನಿಮಿಷಗಳು ಮತ್ತು ಭಾಷಣ ಕನಿಷ್ಠ 2 ನಿಮಿಷ ಇರತಕ್ಕದ್ದು, ಫೋಟೋ ಮತ್ತು ವಿಡಿಯೋ ಕಳುಹಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶೋರೂಂಗಳಾದ ಯೆಯ್ಯಾಡಿ, ತೊಕ್ಕೊಟ್ಟು, ಲೇಹಿಡಿಲ್, ವಾಮಂಜೂರಿನ ವಿಕೆ ಫರ್ನೀಚರ್ & ಎಲೆಕ್ಟ್ರಾನಿಕ್ಸ್ ಭೇಟಿ ನೀಡಬಹುದಾಗಿದೆ. ದೂರವಾಣಿ ಸಂಖ್ಯೆ:8748800666 ಅಥವಾ http://www.vkfurnitureandelectronics.com ಸಂಪರ್ಕಿಸಬಹುದಾಗಿದೆ.