ಮೂಡುಬಿದಿರೆ, ಆ. 13 (DaijiworldNews/AK):ಅತೀ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ವಿದ್ಯಾಗಿರಿ ಒಂದು. ಈ ವಿದ್ಯಾಗಿರಿ ಪ್ರದೇಶದಲ್ಲಿ ಇದೀಗ ಮೂಡುಬಿದಿರೆಯ ಮೊದಲನೇ ಮಾಲ್ ‘ಐಕೇರ್ ಸಿಟಿ ಮಾಲ್’ ಉದ್ಘಾಟನೆಗೆ ಅಣಿಯಾಗುತ್ತಿದೆ.
















ಹಲವು ವರ್ಷಗಳ ಮೂಡುಬಿದಿರೆಯ ಜನರ ಬೇಡಿಕೆಯನ್ನು ಐಕೇರ್ ಸಿಟಿ ಮಾಲ್ ನೀಗಿಸಲಿದೆ. ಎರಡು ಬೇಸ್ಮೆಂಟ್ ಪಾರ್ಕಿಂಗ್ ಸೇರಿ ಸುಮಾರು ಎಂಟು ಅಂತಸ್ತುಗಳಿರುವ ಈ ಮಾಲ್ ನಲ್ಲಿ 200 ರಿಂದ 1200 ಜನ ಸಾಮರ್ಥ್ಯವಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ‘ಮೆಲಾಶ್ ಬ್ಯಾಂಕ್ವೆಟ್’ ಹೆಸರಿನ ಆಡಿಟೋರಿಯಂ ಈಗಾಗಲೇ ಕಾಯಾರಂಭ ಮಾಡಿದೆ.
ಮಾಲ್ ನ 90% ಕೆಲಸ ಈಗಾಗಲೇ ಮುಗಿದಿದ್ದು ಕೆಲವೇ ತಿಂಗಳುಗಳಲ್ಲಿ ಮೂಡುಬಿದಿರೆ ಜನರಿಗೆ ಲಭ್ಯವಾಗಲಿದೆ. ಮೂಡುಬಿದಿರೆಯ ಸಿನಿಮಾ ಪ್ರಿಯರಿಗೆ ನಗರದಲ್ಲಿ ಯಾವುದೇ ಥಿಯೇಟರುಗಳಿಲ್ಲ. ಹಾಗಾಗಿ ಮೂಡುಬಿದಿರೆಯ ಜನ ಮಂಗಳೂರಿಗೆ ಹೋಗಬೇಕಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಐಕೇರ್ ಸಿಟಿ ಮಾಲ್ ನಲ್ಲಿ ಎರಡು ಮಲ್ಟಿಫ್ಲೆಕ್ಸ್ ಥಿಯೇಟರ್ ಕೂಡ ಕಾರ್ಯಾರಂಭ ಮಾಡಲಿದ್ದು, ಮೂಡುಬಿದಿರೆಯ ಜನರಿಗೆ ಅನುಕೂಲವಾಗಲಿದೆ.
ಫುಡ್ ಕೋರ್ಟ್,ಹೈಪರ್ಮಾರ್ಕೆಟ್ ಬ್ರಾಂಡೆಡ್ ಷೋರೂಮ್ ಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಇಕೇರ್ ಸಿಟಿ ಮಾಲ್ ನಲ್ಲಿ ಲಭ್ಯವಿದೆ. ಬಾರ್ & ರೆಸ್ಟೋರೆಂಟ್ ಸೇರಿದಂತೆ ದೂರದೂರುಗಳಿಂದ ಮೂಡುಬಿದಿರೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಇಲ್ಲಿ ಸೂಟ್ ರೂಮ್ ಗಳು ಕೂಡಾ ಲಭ್ಯವಾಗಲಿವೆ.
ಈ ಮಾಲ್ ನಲ್ಲಿ ವಾಣಿಜ್ಯ ಮಳಿಗೆಗಳನ್ನು ಪಡೆಯಲು ಬಯಸುವವರು, ಐಕೇರ್ ಸಿಟಿ ಮಾಲ್ ಗೆ ಖುದ್ದಾಗಿ ಬಂದು ಇಲ್ಲಿರುವ ವ್ಯವಸ್ಥೆಗಳನ್ನು ನೋಡಬಹುದು ಎನ್ನುತ್ತಾರೆ ಐಕೇರ್ ಸಿಟಿ ಮಾಲ್ ನ ಪ್ರವರ್ತಕ ಅಶ್ವಿನ್ ಜೊಸ್ಸಿ ಪಿರೇರಾ.
ಐಕೇರ್ ಬೆಲ್ ಸ್ಟ್ರೀಟ್ ಪ್ಯಾಲೇಸ್ ನಲ್ಲಿ ಕೆಲವೇ ಫ್ಲ್ಯಾಟುಗಳು ಲಭ್ಯ. ಮೂಡುಬಿದಿರೆ ಕೋರ್ಪುಸ್ ಕ್ರೀಸ್ತಿ ಚರ್ಚ್ ಬಳಿಯಲ್ಲಿದ್ದು, ನಿರ್ಮಾಣ ಹಂತದಲ್ಲಿಯೇ ಅತೀ ಹೆಚ್ಚು ಬೇಡಿಕೆ ಹೊಂದಿರುವ ಐಕೇರ್ ಬೆಲ್ ಸ್ಟ್ರೀಟ್ ಪ್ಯಾಲೇಸ್ ಅಪಾರ್ಟ್ಮೆಂಟ್ನಲ್ಲಿ ಎರಡು ಮತ್ತು ಮೂರು ಬೆಡ್ರೂಂ ನ ಕೆಲವೇ ಫ್ಲ್ಯಾಟುಗಳು ಲಭ್ಯವಿವೆ. ಮೂಡುಬಿದಿರೆ ನಗರದ ಹೃದಯ ಭಾಗದಲ್ಲಿರುವ ಈ ಅಪಾರ್ಟ್ಮೆಂಟ್ ಕಟ್ಟಡ ಎಲ್ಲಾ ರೀತಿಯಲ್ಲಿಯೂ ಗ್ರಾಹಕರಿಗೆ ಅನುಕೂಲವಾಗುವಂತಿದೆ.
ಕೆಂಪು ಕಲ್ಲು, ಮರಳು ಇತ್ಯಾದಿ ಕಟ್ಟಡ ಸಾಮಾಗ್ರಿಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಮೂಡುಬಿದಿರೆಯಾದ್ಯಂತ ನಿರ್ಮಾಣ ಕಾಮಗಾರಿಗಳು ಮೊಟಕುಗೊಂಡಿದ್ದರೂ ಐಕೇರ್ ಬೆಲ್ ಸ್ಟ್ರೀಟ್ ಪ್ಯಾಲೇಸ್ ಕೆಲಸ ಮಾತ್ರ ಭರದಿಂದ ಸಾಗುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ವೇಗವಾಗಿ ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸುವ ಉದ್ದೇಶವಿದೆ ಎನ್ನುತ್ತಾರೆ ಐಕೇರ್ ಬಿಲ್ಡರ್ಸ್ & ಡೆವಲಪರ್ಸ್ ನ ಅಶ್ವಿನ್ ಜೊಸ್ಸಿ ಪಿರೇರಾ.
ಚರ್ಚ್, ದೇವಸ್ಥಾನ, ಮಸೀದಿ, ವಾಣಿಜ್ಯ ಮಳಿಗೆಗಳು, ಶಾಲಾ ಕಾಲೇಜುಗಳು, ಆಸ್ಪತ್ರೆ, ಮಾರ್ಕೆಟ್, ಬಸ್ಸು, ರಿಕ್ಷಾ ಸ್ಟ್ಯಾಂಡ್ ಇತ್ಯಾದಿ ಹತ್ತಿರದಲ್ಲೇ ಇರುವ ಮೂಡುಬಿದಿರೆಯ ಅತ್ಯುತ್ತಮ ಅಪಾರ್ಟ್ಮೆಂಟ್ಗಳಲ್ಲಿ ಇದು ಒಂದಾಗಲಿದೆ.
ಮುಂಬರುವ ದಿನಗಳಲ್ಲಿ ಈ ಕಟ್ಟಡದಲ್ಲಿನ ಫ್ಲ್ಯಾಟುಗಳಿಗೆ ಅತೀ ಹೆಚ್ಚಿನ ದರ ಲಭ್ಯವಾಗಲಿದ್ದು, ಇನ್ನು ಕೆಲವೇ ಫ್ಲ್ಯಾಟುಗಳು ಗ್ರಾಹಕರಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880774702
ICARE Builders and Developers BELL STREET PALACE, MOODBIDRI- daijiworld.com