ಮಂಗಳೂರು,ಆ. 13 (DaijiworldNews/AK): ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಂಗಳೂರಿನ ಬಳ್ಕುಂಜೆ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಾಮಾಯಿ ದೇವಾಸ್ಥಾನದ ಧರ್ಮಾಧಿಕಾರಿ ಮೋಹನ್ ದಾಸ್ ಸುರತ್ಕಲ್ ನೇತೃತ್ವದಲ್ಲಿ ಕಿನ್ನಿಗೋಳಿಯ ಮೆಣ್ಣಬೆಟ್ಟು ಗ್ರಾಮದ ಮುಂಚಿಕಾಡು ಎಂಬ ಗ್ರಾಮದ ಜನರಿಗೆ ತ್ರಿವರ್ಣ ಧ್ವಜ ವಿತರಣೆ ಮಾಡುವ ಮೂಲಕ ಹತ್ತನೇ ವರ್ಷದ ತ್ರಿವರ್ಣ ಧ್ವಜ ವಿತರಣೆಯನ್ನು ಅದ್ದೂರಿಯಾಗಿ ನೆರವೇರಿಸಿದರು.

ಮೋಹನ್ ಅವರು ತನ್ನ ತಂದೆ, ಕೇರಳ ಮೂಲದ ಸ್ವಾತಂತ್ರ್ಯ ಹೋರಾಟಗಾರ ಉಪೇಂದ್ರ ವಾರಿಯಾರ್ ಅವರ ಸ್ಮರಣಾರ್ಥವಾಗಿ ಕಳೆದ 10 ವರ್ಷಗಳಿಂದ ಮಂಗಳೂರು ಭಾಗದಲ್ಲಿ ಮನೆ ಮನೆಗಳಿಗೆ ಭಾರತದ ರಾಷ್ಟ್ರ ಧ್ವಜ ವಿತರಿಸುವ ಕಾರ್ಯ ನಡೆಸುತ್ತಿದ್ದು. ಈಗಾಗಲೇ ಮಂಗಳೂರು ಕಿನ್ನಿಗೋಳಿಯ ಉಳೆಪಾಡಿ, ಕುಕ್ಜೆಟ್ಟೆ, ಶಾಂತಿ ಪಲ್ಕೆ ಬಳ್ಕುಂಜೆ ಕವತಾರು ಪ್ರದೇಶದಲ್ಲಿ 1200 ಕ್ಕೂ ಅಧಿಕ ಧ್ವಜ ವಿತರಣೆ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ದೇಶ ಪ್ರೇಮ ಮತ್ತು ಸ್ವಾತಂತ್ರ್ಯದ ಮಹತ್ವಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.