ಮಂಗಳೂರು, ಆ. 13 (DaijiworldNews/AK): ಬುಧವಾರ ಬೆಳಿಗ್ಗೆ ಅಡ್ಯಾರ್ ಬಳಿ ನಿಟ್ಟೆ (ಡೀಮ್ಡ್-ಟು-ಯೂನಿವರ್ಸಿಟಿ) ಗೆ ಸೇರಿದ ಕಾಲೇಜು ಬಸ್ನಲ್ಲಿ ಕರ್ತವ್ಯದಲ್ಲಿದ್ದ ಬಸ್ ಕಂಡಕ್ಟರ್ ಕುಸಿದು ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ.

ಮೃತ ಸಂತೋಷ್ (40) ಕುತ್ತಾರು ನಿವಾಸಿ. ಅವರು ಹಲವು ವರ್ಷಗಳಿಂದ ನಿಟ್ಟೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ, ಅವರು ಶಾಲಾ ವಿದ್ಯಾರ್ಥಿಗಳನ್ನು ಬಸ್ಗೆ ಹತ್ತಿಸುತ್ತಿರುವಾಗ ಹಠಾತ್ತ ಕುಸಿದು ಬಿದ್ದ ಘಟನೆ ಸಂಭವಿಸಿದೆ.
ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು, ಆದರೆ ಅವರು ದಾರಿ ಮಧ್ಯೆ ನಿಧನರಾದರು. ಪ್ರಾಥಮಿಕ ವರದಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಿಟ್ಟೆ ಸಂಸ್ಥೆಯು ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳು ಮತ್ತು ಆಶ್ರಮಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯ ಬಸ್ಸುಗಳಲ್ಲಿ ಶಾಲೆಗೆ ಬಿಡುವ ಸೇವೆಯನ್ನು ನಡೆಸುತ್ತಿದೆ, ಮಕ್ಕಳನ್ನು ಶಾಲೆಗೆ ಬಿಡುವ ನಿಟ್ಟೆ ಸಂಸ್ಥೆಯ ಬಸ್ಸಿನಲ್ಲೇ ಸಂತೋಷ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂತೋಷ್ ಅವರು ತಾಯಿ, ತಮ್ಮ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.