ಪುತ್ತೂರು, ಆ.17 (Daijiworld News/TA): ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಚುರುಕಿನಿಂದ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿ ಕದ್ದ ಸರಕನ್ನು ವಶಕ್ಕೆ ಪಡೆದು ಯಶಸ್ವಿ ಕಾರ್ಯಾಚರಣೆ ನಡೆಸಿದೆ.


ಬಂಧಿತನನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29)ಎಂದು ಗುರುತಿಸಲಾಗಿದೆ. ಪುತ್ತೂರಿನ ಈಶ್ವರಮಂಗಲದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 30.120 ಗ್ರಾಂ ಬಂಗಾರ ಹಾಗೂ ರೂ.5000 ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕಳ್ಳತನಕ್ಕೆ ಬಳಸಿದ ಡಿಸ್ಕವರಿ ಬೈಕ್ ಕೂಡಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಪ್ರಕರಣದ ಪತ್ತೆ ಹಚ್ಚುವಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕ ರವಿ ಬಿ ಎಸ್ ರವರ ಮಾರ್ಗದರ್ಶನ ಅತ್ಯಂತ ಮಹತ್ವ ಪಡೆದಿದೆ. ಕಾರ್ಯಾಚರಣೆಯ ನೇತೃತ್ವವನ್ನು ಪುತ್ತೂರು ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಜಂಬುರಾಜ್ ಮಹಾಜನ್ ವಹಿಸಿದ್ದರು.
ಪತ್ತೆದಾರ ತಂಡದಲ್ಲಿ ಎಎಸ್ಐ ಚಂದ್ರಶೇಖರ್, ಹೆಡ್ ಕಾನ್ಸ್ಟೆಬಲ್ಗಳು ಪ್ರವೀಣ್ (HC 1050), ಮಧು (HC 396), ಹರೀಶ್ (HC 557), ಸುಬ್ರಹ್ಮಣ್ಯ (HC 896) ಮತ್ತು ಪೊಲೀಸ್ ಕಾನ್ಸ್ಟೆಬಲ್ಗಳು ಆಕಾಶ್ (PC 452), ಯುವರಾಜ್ (PC 455), ಶರಣಪ್ಪ ಪಾಟೀಲ್ (PC 2394) ಸೇರಿದಂತೆ, ಚಾಲಕರಾದ ಯಜ್ಞ (ARSI), ಹರಿಪ್ರಸಾದ್ ಮತ್ತು ನಿತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.