ಸುಳ್ಯ, ಆ.18 (Daijiworld News/AK): ಕೇರಳ ರಾಜ್ಯ ಲಾಟರಿಯಲ್ಲಿ ಸುಳ್ಯ ತಾಲೂಕಿನ ನಿವಾಸಿಯೊಬ್ಬರು 1 ಕೋಟಿ ರೂಪಾಯಿ ಬಂಪರ್ ಬಹುಮಾನ ಗೆದ್ದಿದ್ದಾರೆ. ಶನಿವಾರ ನಡೆದ ಡ್ರಾದಲ್ಲಿ, OG 445643 ಸಂಖ್ಯೆಯ ಟಿಕೆಟ್ ಸುಳ್ಯ ತಾಲ್ಲೂಕಿನ ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲೀಕ ವಿನಯ್ ಯಾವಟೆ ಅವರಿಗೆ ಅದೃಷ್ಟ ಒಲಿದಿದೆ.

ಅವರು 1 ಕೋಟಿ ರೂಪಾಯಿ ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. ವಿನಯ್ ಕಾಸರಗೋಡಿನ ಪಂಜಿಕಲ್ಲು ಎಂಬಲ್ಲಿ ಟಿಕೆಟ್ ಖರೀದಿಸಿದ್ದರು.