ಕಡಬ, ಆ. 19 (DaijiworldNews/AK):ಕಡಬ ತಾಲೂಕಿನ ಸವಣೂರು ಪರಿಸರದಲ್ಲಿ ಆ.19 ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬೀಸಿದ ಭಾರೀ ಬಿರುಗಾಳಿಯಿಂದಾಗಿ ಅಪಾರ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.




ಸವಣೂರು ಗ್ರಾಮದ ಮೆಸ್ಕಾಂ ಉಪವಿಭಾಗದಲ್ಲಿ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರಗಳು ಉರುಳಿ ಬಿದ್ದು ಸುಮಾರು ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಬಿರುಗಾಳಿಗೆ ಅರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಿಗೂ ಹಾನಿಯನ್ನುಂಟು ಮಾಡಿದೆ. ಹಲವಾರು ವಸತಿ ಮನೆಗಳು ಅಡಿಕೆ ತೋಟ, ತೆಂಗಿನ ಮರಗಳು ಸೇರಿದಂತೆ ಲಕ್ಷಾಂತರ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.