ಕಾಸರಗೋಡು,ಆ. 19 (DaijiworldNews/TA): ಕಾಡುಪ್ರಾಣಿಗಳ ಬೇಟೆಗೆ ತೆರಳಿದ್ದ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರಿಂದ ನಾಡ ಕೋವಿ ಹಾಗೂ ಐದು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುತ್ತಿಕೋಲ್ ನ ಸಮೀರ್, ನಿತಿನ್ ರಾಜ್ (25) , ರತೀಶ್ (26) ಮತ್ತು ಕೊಂಬನಡ್ಕ ದ ಪ್ರವಿತ್ (26) ಬಂಧಿತರು. ವರ್ಕಾಡಿ ಮಜೀರ್ ಪಳ್ಳದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಇವರನ್ನು ಪ್ರಶ್ನಿಸಿದಾಗ ಇವರ ಬಳಿ ಕೋವಿ,ಗುಂಡುಗಳು ಪತ್ತೆಯಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.