ಉಡುಪಿ , ಸೆ. 03 (DaijiworldNews/AK): ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್ ಪ್ರತಿ ವರ್ಷದಂತೆ ಈ ಬಾರಿ ಕೂಡಾ “ಯಶೋಧ ಕೃಷ್ಣ” ಮತ್ತು “ಬೆಣ್ಣೆ ಕೃಷ್ಣ” ಛಾಯಾಚಿತ್ರ ಸ್ಪರ್ಧೆ ಯನ್ನು ಆಯೋಜಿಸಿದೆ.

ಕಳೆದ ಹಲವಾರು ವರ್ಷಗಳಿಂದ ದಾಯ್ಜಿವಲ್ಡ್ ಉಡುಪಿ ಮತ್ತು ಕಿಶೂ ಎಂಟರ್ ಪ್ರೈಸಸ್ ಈ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು ನೂರಾರು ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ ವಿಶೇಷವಾಗಿ 0-2 ವರ್ಷದ ಮಕ್ಕಳಿಗೆ ಯಶೋಧ ಕೃಷ್ಣ ಮತ್ತು 2-6 ವರ್ಷದ ಮಕ್ಕಳಿಗೆ “ಬೆಣ್ಣೆ ಕೃಷ್ಣ” ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತಿ ವಿಭಾಗದಲ್ಲಿ ಕೂಡಾ ವಿಜೇತರಿಗೆ ಪ್ರಥಮ, ದ್ವಿತೀಯ , ತೃತೀಯ ಮತ್ತು ಮೂರು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
“ಯಶೋಧ ಕೃಷ್ಣ” ಛಾಯಾಚಿತ್ರ ಸ್ಪರ್ಧೆ – 2025
· ಮಗುವಿನ ವಯಸ್ಸು 0 ರಿಂದ 2 ವರ್ಷದ ವರೆಗೆ ಇರಬೇಕು (ಸೆಪ್ಟೆಂಬರ್ 18, 2025 ರ ಒಳಗಿನ)
· ತಾಯಿಯ ವಯಸ್ಸು 22 ವರ್ಷ ಮೇಲ್ಪಟ್ಟಿರಬೇಕು.
· ಛಾಯಾಚಿತ್ರದಲ್ಲಿ ಯಶೋಧ-ಕೃಷ್ಣ ಜೊತೆಯಲ್ಲಿರಬೇಕು.
“ಬೆಣ್ಣೆ ಕೃಷ್ಣ” ಛಾಯಾಚಿತ್ರ ಸ್ಪರ್ಧೆ – 2025
· ಮಗುವಿನ ವಯಸ್ಸು 2 ರಿಂದ 6 ವರ್ಷದ ವರೆಗೆ ಇರಬೇಕು. (ಸೆಪ್ಟೆಂಬರ್ 18, 2025 ರ ಒಳಗಿನ)
· ವಿಷಯ ವಸ್ತು ಬೆಣ್ಣೆ ಆಗಿರಲಿ.
ನಿಯಮಗಳು ಹಾಗೂ ಷರತ್ತುಗಳು :
* ಎಡಿಟ್ ಮಾಡಿದ ಮತ್ತು ವಾಟರ್ಮಾರ್ಕ್ ಬಳಸಿದ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
* ಛಾಯಾಚಿತ್ರಗಳು ಸ್ವಾಭಾವಿಕವಾಗಿದ್ದು, ಇತ್ತೀಚಿಗೆ ತೆಗೆದ ಛಾಯಾಚಿತ್ರವಾಗಿರಬೇಕು.
* ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರಬೇಕು.
* 3 ಭಂಗಿಯ 3 ಛಾಯಾಚಿತ್ರಗಳನ್ನು ನಮಗೆ ಕಳುಹಿಸಿ.
* ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನ ಬಳಕೆ ಮಾಡುವಂತಿಲ್ಲ.
* ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು.
* ತಾಯಿಯ ಗುರುತಿನ ಚೀಟಿ (ಆಧಾರ್ ಕಾರ್ಡ್) ಪ್ರತಿ ಲಗತ್ತಿಸಬೇಕು.
* ಛಾಯಾಚಿತ್ರಗಳೊಂದಿಗೆ ಸ್ಪರ್ಧಿಯ ಹೆಸರು, ಪೋಷಕರ ಹೆಸರು, ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ಇರತಕ್ಕದ್ದು.
* ತೀರ್ಪುಗಾರರ ತೀರ್ಮಾನವೇ ಅಂತಿಮ.
* ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 18, 2025
* ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
ನೋಂದಾವಣೆಗಾಗಿ ಲಾಗಿನ್ ಆಗಿ : https://www.daijiworldudupi.com/SKJ25/
ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 73386 37686 / 87 / 82, +91 99001 61556