ಮಂಗಳೂರು, ಸೆ. 04 (DaijiworldNews/AK): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸೆಪ್ಟೆಂಬರ್ 4 ರ ಗುರುವಾರ ಬೆಂದೂರ್ ಮಿನಿ ಹಾಲ್ನಲ್ಲಿ ದಿವಂಗತ ಕೊಂಕಣಿ ಸಾಂಸ್ಕೃತಿಕ ಐಕಾನ್ ಎರಿಕ್ ಒಝೇರಿಯೊ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.























ಈ ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ನಾಯಕರು ಒಟ್ಟುಗೂಡಿದರು. ಅವರು ಕೊಂಕಣಿ ಸಂಗೀತ, ಭಾಷೆ ಮತ್ತು ಗುರುತಿಗೆ ಒಝೇರಿಯೊ ಅವರ ಜೀವಮಾನದ ಸೇವೆಯನ್ನು ಪ್ರೀತಿಯಿಂದ ಸ್ಮರಿಸಿದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಎರಿಕ್ ಒಝೇರಿಯೊ ಅವರನ್ನು ಗಮನಾರ್ಹವಾದ ಕಾರ್ಯಕ್ಷೇತ್ರದ ವಿವಿಧ ಮಜಲುಗಳಾದ - ವ್ಯಕ್ತಿ ಮತ್ತು ಶಕ್ತಿ ಎಂದು ಸ್ಮರಿಸಿದರು.
ಪ್ರಸ್ತಾವನೆಗೈದು ಸ್ವಾಗತ ಕೋರಿದ ಅಕಾಡೆಮಿ ಅಧ್ಯಕ್ಷ ಜೋಕಿಂ Stany Alvares ತನ್ನ ಮತ್ತು ಎರಿಕ್ ರವರ 37 ವರ್ಷಗಳ ಒಡನಾಟವನ್ನು ಮೆಲುಕು ಹಾಕಿದರು. ಎರಿಕ್ರವರ ಪತ್ನಿ ಜೊಯ್ಸ್ರವರು, ಒಝೇರಿಯೊ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಗಳು ಡಾ ರಶ್ಮಿ, ಅಳಿಯ ಸಂಗೀತಗಾರ ಆಲ್ವಿನ್ ಫೆರ್ನಾಂಡಿಸ್, ಮೊಮ್ಮಕ್ಕಳಾದ ಅಮನ್, ಜಿಯಾ ಹಾಗೂ ಅಕಾಡಮಿ ಅಧ್ಯಕ್ಷರು, ಸದಸ್ಯರಾದ Navin Lobo Bajal , Ronald Crasta , Akshatha Nayak Kadeshivalaya , ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತ್ಯದ ಪಿಆರ್ಒ ರೊಯ್ ಕ್ಯಾಸ್ತೆಲಿನೊ, ಕೊಂಕಣಿ ಲೇಖಕರ ಒಕ್ಕೂಟದ ಮುಖ್ಯಸ್ಥ ರಿಚ್ಚಾರ್ಡ್ ಮೊರಾಸ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ Appi S , ಪ್ರಮುಖ ಭಾಷಣಕಾರರು, ಲೇಖಕರು, ಸಂಘಟಕರು ಮತ್ತು ಅಭಿಮಾನಿಗಳು ಪುಷ್ಪಾರ್ಚನೆ ಮಾಡಿದರು.
ಕೊಂಕಣಿ ಅಕಾಡೆಮಿ ಮತ್ತು ಶಿಕ್ಷಣ ಕ್ಷೇತ್ರ (ಸ್ಟೀವನ್ ಕ್ವಾಡ್ರಸ್), ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರ (ಚರಣ್ ಮಲ್ಯ) ಹಾಗೂ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರೇರಣಾಶಕ್ತಿ (ಕನ್ಸೆಪ್ಟಾ ಫೆರ್ನಾಂಡಿಸ್) ಇವರುಗಳು ತಮ್ಮ ಒಡನಾಟಗಳನ್ನು ಆತ್ಮೀಯವಾಗಿ ಅನಾವರಣಗೊಳಿಸಿ ಮಾತನಾಡಿದರು.
ಎರಿಕ್ರವರ ಅಭಿಮಾನಿ ನಾರಾವಿಯ ಗೋಪಾಲಕೃಷ್ಣ ಇವರು ಸ್ಥಳದಲ್ಲೇ ರಚಿಸಿದ ಕವಿತೆಗೆ ಗಾಯಕ ರೊನಿ ಕ್ರಾಸ್ತಾ ಸ್ವರ ಸಂಯೋಜಿಸಿ ಹಾಡಿದರು. ಅಕಾಡೆಮಿ ಸದಸ್ಯ Samarth Bhat ಧನ್ಯವಾದವನ್ನಿತ್ತರು. ರೊನಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.
https://www.facebook.com/share/1BPmdQTrpE/