ಕಾರ್ಕಳ, ಸೆ. 17 (DaijiworldNews/AA): ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.



ಇದರ ಭಾಗವಾಗಿ, ಹೊಸಮಾರ್ನಲ್ಲಿರುವ 'ಲೀಲಾ ಫಾರ್ಮ್ಸ್' ಎಂಬ ಹಣ್ಣುಗಳ ತೋಟಗಾರಿಕಾ ತೋಟಕ್ಕೆ ಭೇಟಿ ಏರ್ಪಡಿಸಲಾಗಿತ್ತು. ಅಲ್ಲಿ ವಿದ್ಯಾರ್ಥಿಗಳು ವಿವಿಧ ದೇಸೀ ಮತ್ತು ವಿದೇಶಿ ಹಣ್ಣಿನ ತಳಿಗಳು, ಅವುಗಳ ಕೃಷಿ ವಿಧಾನ, ಕೊಯ್ಲು, ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಮಾಹಿತಿ ಪಡೆದುಕೊಂಡರು.
ಲೀಲಾ ಫಾರ್ಮ್ಸ್ನ ಮಾಲೀಕರಾದ ಶಿವಾನಂದ ಶೆಣೈ ಮತ್ತು ಅವರ ಪುತ್ರ ಶ್ರವಣ್ ಶೆಣೈ ಅವರು ತೋಟಗಾರಿಕಾ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ದೀಪಕ್, ಸುಕನ್ಯಾ, ಮತ್ತು ಅಭಿನಯ ಅವರು ನಿರ್ವಹಿಸಿದ್ದು, ಉಪಪ್ರಾಂಶುಪಾಲರಾದ ಪ್ರಕಾಶ್ ಭಟ್ ಅವರು ಆಯೋಜಿಸಿದ್ದರು.