ಮಂಗಳೂರು, ಸೆ. 18 (DaijiworldNews/AK): ಮಹಾನಗರ ಪಾಲಿಕೆ ವ್ಯಾಪ್ತಿಯ ಗುಜ್ಜರೆಕೆಯ ನೀರು ಕಲುಷಿತಗೊಂಡಿದ್ದು, ಇದರ ಬಗ್ಗೆ ಸ್ಥಳೀಯ ಸಾರ್ವಜನಿಕರ ಜೊತೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಇಂದು ಗುಜ್ಜರೆಕೆರೆಗೆ ಭೇಟಿ ನೀಡಿದರು.


ಈ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲಾದ ಕಾಮಗಾರಿಗಳನ್ನು ವೀಕ್ಷೀಸಿದರು ಮತ್ತು ಇಲ್ಲಿ ಅಗಬೇಕಾದ ಇನ್ನೂ ಕೆಲವು ಮೂಲಭೂತ ಸೌಕರ್ಯಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಸ್ಥಳೀಯ ನಗರ ಪಾಲಿಕೆ ಇಂಜಿನಿಯರ್ ಮತ್ತು ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಇನ್ನೂ ಆಗಬೇಕಾದ ಕಾಮಗಾರಿಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿʼಸೋಜಾರವರು ಕಲುಷಿತ ನೀರು ಕೆರೆಯ ನೀರಿನಲ್ಲಿ ಮಿಶ್ರಣಗೊಳ್ಳುವದನ್ನು ತಪ್ಪಿಸಲು ಬೇಕಾದ ಕ್ರಮ ಕೈಗೊಳ್ಳಬೇಕೆಂದು ಮತ್ತು ಎಲ್ಲಿಯವರೆಗೆ ನೀರು ಕಲುಷಿತಗೊಳ್ಳುತ್ತದೆ ಅಲ್ಲಿಯವರೆಗೆ ಕೆರೆಯ ನೀರನ್ನು ಉಪಯೋಗ ಮಾಡಲು ಸಾಧ್ಯವಿಲ್ಲ ಸಾರ್ವಜನಿಕರು ಇದನ್ನು ಯಾವ ರೀತಿಯಿಂದಲೂ ಉಪಯೋಗ ಮಾಡಲು ಅಸಾಧ್ಯ ಪರಿಸ್ಥಿತಿ ಉಂಟಾಗಿದೆ ಈ ಬಗ್ಗೆ ತನಿಖೆ ನಡೆಸಿ, ಸರಿಯಾದ ಕ್ರಮ ಕೈಗೊಳ್ಳಲು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಗುಜ್ಜರೆಕೆರೆಯಲ್ಲಿ ಸ್ಥಾಪಿಸಲಾದ ವ್ಯಾಯಾಮಕ್ಕೆ ಸಂಬಂಧಪಟ್ಟ ಪರಿಕರಗಳು ಕೂಡ ನಾದುರಸ್ಥಿಯಲ್ಲಿದ್ದು, ಅದನ್ನು ಕೂಡ ಸರಿಪಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಅನೇಕ ಮನವಿಗಳನ್ನು ನೀಡಿದ್ದು, ಸ್ವಚ್ಚತೆ ಕಾಪಾಡಲು ಹಾಗೂ ದಿನನಿತ್ಯ ವಾಯುವಿಹಾರಕ್ಕಾಗಿ ಬರುವ ಜನರ ಹಾಗೂ ಮತ್ತು ಸುತ್ತತ-ಮುತ್ತ ನಡೆಯುವ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರಿ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರು. ಈ ಬಗ್ಗೆ ನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಐವನ್ ಡಿʼಸೋಜಾ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ನಂದಕಿಶೋರ್, ಸ್ಮಾರ್ಟ್ ಸಿಟಿ ಅಧಿಕಾರಿ ಮಂಜು, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಕಾಂಗ್ರೆಸ್ ನಾಯಕರಾದ ಹೊನ್ನಯ್ಯ, ದುರ್ಗಾಪ್ರಸಾದ್, ಮನೀಶ್ ಬೋಳಾರ್, ನವಾಜ್ ಜೆಪ್ಪು, ನೆಲ್ಸನ್, ಮಹಿಳಾ ಕಾಂಗ್ರೆಸ್ ನ ಅಪ್ಪಿಲತ, ಚಂದ್ರಕಲಾ ಜೋಗಿ, ನಮಿತಾ ರಾವ್, ಸಬಿತಾ ಮಿಸ್ಕಿತ್, ಶಾಲಿನಿ, ನೀತು ಡಿಸೋಜಾ, ಮೇಬಲ್ ಮುಂತಾದವರು ಉಪಸ್ಥಿತರಿದ್ದರು.