ಕಾರ್ಕಳ, ಸೆ. 20 (DaijiworldNews/AA): ಆನ್ಲೈನ್ ಗೇಮಿಂಗ್ ಆಡುತ್ತ ಇತರರಿಗೆ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗಂಜಿಮಠದ ನಜೀರ್ (44) ಬಂಧಿತ ಆರೋಪಿ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮಣ್ ಗ್ರಾಮದಲ್ಲಿ ಈತ ಆನ್ಲೈನ್ ಗೇಮಿಂಗ್ ಆಡುತ್ತ ಇತರರಿಗೆ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ಆತನನ್ನು ವಶಕ್ಕೆ ಪಡೆದಿದ್ದಾರೆ.
ನಜೀರ್ ಮೊಬೈಲ್ ಫೋನ್ ಪರಿಶೀಲಿಸಿದಾಗ ವೆಬ್ ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಆತನ ಬಳಿ ಇದ್ದ 30,000 ರೂ. ವಶ ಪಡಿಸಿಕೊಳ್ಳಲಾಗಿದೆ.