ಕಾಸರಗೋಡು, ಸೆ.13 (DaijiworldNews/AK):ನದಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಕಾಸರಗೋಡು ತ್ರಿಕ್ಕರಿಪ್ಪುರ ಕವ್ವಾಯಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ವಲಿಯಪರಂಬ ಬೀರಾನ್ ಕಡವಿನ ನಿಸಾರ್ ಅವರ ಪುತ್ರ ಕೆ.ಪಿ. ಮುಹಮ್ಮದ್ (13) ಮೃತ ವಿದ್ಯಾರ್ಥಿ. ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ನಾಗರಿಕರು , ಅಗ್ನಿಶಾಮಕ ದಳದ ಸಿಬ್ಬಂದಿ, ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ತ್ರಿಕ್ಕರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.