ಕುಂಬಳೆ, ಸೆ.21 (DaijiworldNews/TA): ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕಾಸರಗೋಡು ಕುಂಬಳೆ ಶೇಡಿಕಾವು ಎಂಬಲ್ಲಿ ನಡೆದಿದೆ.

ಶೇಡಿಕಾವಿನ ಶಂಕರ ( 52) ಮೃತಪಟ್ಟವರು. ಮನೆಯೊಂದರ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದಾಗ ಎರಡನೇ ಮಹಡಿಯಿಂದ ಕೆಳಗೆ ಬಿದ್ದ ಇವರು ಗಂಭೀರ ಗಾಯಗೊಂಡಿದ್ದು, ಕುಂಬಳೆ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು.