ಮಂಗಳೂರು, ಸೆ. 23 (DaijiworldNews/AK): ನಗರದ ಕದ್ರಿ ಲೋಬೊ ಲೇನ್ನಲ್ಲಿ ನಕಲಿ ಮದ್ಯ ತಯಾರಿಕಾ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5,57,690 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.



ಮೈಕಲ್ ಬ್ಲೈಸ್ ಮಿನೇಜಸ್ ಎಂಬಾತನ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು. ಮೈಕಲ್, ಬ್ಲೈಸ್ ಮಿನೀಜಸ್ ಎಂಬುವರ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಕಲಿ ವೈನ್ - 238.500 ಲೀಟರ್, ವೈನ್ ತಯಾರಿಸುವ ಕೊಳೆ - 1,500 ಲೀಟರ್, ಮದ್ಯ - 3.180 ಲೀಟರ್ , ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ನಿರ್ದೇಶನದಂತೆ , ದ.ಕ.ಜಿಲ್ಲೆ ಅಬಕಾರಿ ಉಪ ಆಯುಕ್ತರು ಮಾರ್ಗದರ್ಶನದಂತೆ, ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ-1, ಮತ್ತು ಮಂಗಳೂರು, ಅಬಕಾರಿ ನಿರೀಕ್ಷರರು, ತಲಪಾಡಿ ತನಿಖಾ ಠಾಣೆ ಯ ಅಬಕಾರಿ ನಿರೀಕ್ಷಕರು ಮತ್ತು ಮಂಗಳೂರು ದಕ್ಷಿಣ ವಲಯ -1 ರ ಅಬಕಾರಿ ನಿರೀಕ್ಷಕರವರ ನೇತೃತ್ವದಲ್ಲಿ ವಲಯದ ಅಬಕಾರಿ ಉಪ ನಿರೀಕ್ಷಕರ ಸಿಬ್ಬಂದಿಗಳೊಂದಿಗೆ ಸೆ.೨೨ ರಂದು ದಾಳಿ ನಡೆಸಲಾಯಿತು.
ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 13(1)(a), 13(1)(f), 14,15,32(1),32(2),(e), 34,38(A) ರಂತೆ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಮಂಗಳೂರು ದಕ್ಷಿಣ ವಲಯ -1 ಕಚೇರಿಯ ಅಬಕಾರಿ ಉಪ ನಿರೀಕ್ಷಕರಾದ ಹರೀಶ್ ಪಿ. ಇವರು ಮೊಕದ್ದಮೆಯನ್ನು ದಾಖಲಿಸಲಾಗಿದೆ.