ಮುಡಿಪು,ಡಿ 9 : ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪುವಿನಲ್ಲಿ ವಾರ್ಷಿಕ ಮಹೋತ್ಸವವು ಅತ್ಯಂತ ವೈಭವದಿಂದ ನಡೆಯಿತು.
ಮೂರು ದಿನಗಳ ಕಾಲ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಎರಡನೇ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ವಂ. ಅಲೋಶಿಯಸ್ ಪಾವ್ಲ್ ಡಿಸೋಜ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಕೃತಜ್ಞತಾ ಪೂಜೆಯನ್ನು ನೆರವೇರಿಸಿದರು.
ತಮ್ಮ ಪ್ರಬೋಧನೆಯಲ್ಲಿ ಮಹೋತ್ಸವದ ಸಂದೇಶವಾದ ಸಂತ ಜೋಸೆಫರಂತೆ ಸುವಾರ್ತೆಗೆ ಸಾಕ್ಷಿಗಳಾಗುವ ಎನ್ನುವ ವಿಚಾರದಲ್ಲಿ ಬೋಧನೆ ನಡೆಸಿದರು.
ವಂ.ಬೆಂಜಮಿನ್ ಪಿಂಟೋ, ಪುಣ್ಯಕ್ಷೇತ್ರದ ನಿರ್ದೇಶಕರು , ವಂ. ಜೆ. ಬಿ. ಸಲ್ಡಾನ್ಹ, ವಂ. ಡೆನಿಸ್ ಸುವಾರಿಸ್, ವಂ. ಲಾರೆನ್ಸ್ ಮಸ್ಕರೇನಸ್, ವಂ. ಸಂತೋಷ್ ಡಿಸೋಜ, ವಂ. ಅಂದ್ರು ಡಿಸೋಜ, ವಂ. ಡೆನ್ಜಿಲ್ ಲೋಬೊ ಸೇರಿದಂತೆ ಸುಮಾರು 20 ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.