ಉಳ್ಳಾಲ, ಸೆ. 24 (DaijiworldNews/AK): ಪ್ರಸ್ತುತ ಭಾರತದಲ್ಲಿ 18,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿದ್ದು, ಅವುಗಳಲ್ಲಿ 1,000 ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಇದರಲ್ಲಿ 250 ಕರ್ನಾಟಕದಲ್ಲೇ ನೆಲೆಗೊಂಡಿವೆ. ಇದು ರಾಜ್ಯದ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಇರುವ ಉದ್ಯಮಶೀಲತೆಯ ಹಸಿವು ಸ್ಪಷ್ಟಪಡಿಸುತ್ತದೆ. ಕರ್ನಾಟಕ ಸರ್ಕಾರವು ಅಕಾಡೆಮಿಕ್ ಕ್ಷೇತ್ರ ಮತ್ತು ಕೈಗಾರಿಕೆಯನ್ನು ನೀತಿಗಳೊಂದಿಗೆ ಸಮನ್ವಯಗೊಳಿಸುವ ಮೂಲಕ ನವೀನತೆ ಮತ್ತು ಆರ್ಥಿಕ ವೃದ್ಧಿಯನ್ನು ವೇಗಗೊಳಿಸುವುದರಲ್ಲಿ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.





ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ಪಾನೀರ್ ನಲ್ಲಿರುವ ನಿಟ್ಟೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೀನ್ ಇನ್ನೋವೇಶನ್ ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಕಳೆದ ಎರಡು ದಶಕಗಳಲ್ಲಿ ಸಾಧಿಸಿರುವುದು ನಿಜಕ್ಕೂ ಅಪೂರ್ವ. ಭಾರತದಲ್ಲಿ ಮೊದಲ ಬಾರಿಗೆ ಆಕ್ವಾಮೆರೈನ್ ಅತ್ಯುನ್ನತ ಕೇಂದ್ರವನ್ನು ಸ್ಥಾಪಿಸಿರುವುದು ನಿಟ್ಟೆಗೆ ಮಾತ್ರವಲ್ಲ, ಕರ್ನಾಟಕದ ಬೆಳವಣಿಗೆಯ ಹಾದಿಯಲ್ಲಿಯೂ ಬಹುಮುಖ್ಯ ಹೆಜ್ಜೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳು, ಅತ್ಯುನ್ನತ ಕೇಂದ್ರಗಳು, ವೆಂಚರ್ ಕ್ಯಾಪಿಟಲ್ ಜಾಲಗಳು, ಹ್ಯಾಕಥಾನ್ಗಳು ಮತ್ತು ನವೀನತಾ ಕಾರ್ಯಕ್ರಮಗಳು ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಮಾತ್ರ ಕೇಂದ್ರೀಕರಿಸಲ್ಪಟ್ಟಿವೆ. ನಿಟ್ಟೆಯ ಈ ಉಪಕ್ರಮದಿಂದ ಸರ್ಕಾರದ ತಲುಪುವಿಕೆ ದೂರದ ಪ್ರದೇಶಗಳಿಗೂ ವಿಸ್ತರಿಸಿ, ಯುವ ಮನಸ್ಸುಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಕರ್ನಾಟಕವು ದೇಶದ ಜೀವ ಆರ್ಥಿಕತೆಯ 20% ಪಾಲನ್ನು ನೀಡುತ್ತಿದೆ. ಜೈವಿಕ ತಂತ್ರಜ್ಞಾನವು ಇನ್ನೂ ಮಗು ಹಂತದಲ್ಲಿದೆ—‘ಹೆಗ್ಗುರುಕು ಹಾಕುತ್ತಿರುವ ಶಿಶು’—ಆದರೆ ಸರಿಯಾದ ಪ್ರತಿಭೆ, ಅಕಾಡೆಮಿಕ್ ಕ್ಷೇತ್ರ, ಕೈಗಾರಿಕೆ ಹಾಗೂ ಸರ್ಕಾರದ ನೀತಿಯೊಂದಿಗೆ ಇದು ಭಾರತದ ಆರ್ಥಿಕತೆಯ ಪ್ರಮುಖ ಚಾಲಕವಾಗಲು ಸಾಧ್ಯ. ಭಾರತದ ಆರ್ಥಿಕತೆಯ ಮೌಲ್ಯ 150 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ ಜೈವಿಕ ತಂತ್ರಜ್ಞಾನವು ಮಹತ್ತರ ಕೊಡುಗೆ ನೀಡಲಿದೆ ಎಂದರು.
ರಾಜ್ಯದ ಜೀವ ಆರ್ಥಿಕತೆ ಇದನ್ನು ಪ್ರತಿಬಿಂಬಿಸುತ್ತದೆ: ಕೃಷಿ-ಜೈವಿಕ ಮೌಲ್ಯ 1.2 ಬಿಲಿಯನ್ ಡಾಲರ್, ಬಯೋಸರ್ವೀಸ್ 5.1 ಬಿಲಿಯನ್ ಡಾಲರ್, ಬಯೋ-ಇಂಡಸ್ಟ್ರಿಯಲ್ 12.1 ಬಿಲಿಯನ್ ಡಾಲರ್ ಮತ್ತು ಬಯೋಫಾರ್ಮಾ 12.6 ಬಿಲಿಯನ್ ಡಾಲರ್. ಕರ್ನಾಟಕ ಸರ್ಕಾರವು ಸೈಬರ್ ಸೆಕ್ಯೂರಿಟಿ, ಕೃಷಿ, ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಮತ್ತು ಬಯೋಟೆಕ್ ಆಕ್ಸಿಲರೇಟರ್ಗಳು, ಸೆಮಿಕಂಡಕ್ಟರ್ಗಳು ಮತ್ತು ಎಲೆಕ್ಟ್ರಾನಿಕ್ಸ್, ಆನಿಮೇಶನ್ ಮತ್ತು ಗೇಮಿಂಗ್, ರೋಬೋಟಿಕ್ಸ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್, ಹೆಲ್ತ್ ಸೈನ್ಸ್, ಆಟೋಮೊಬೈಲ್, ನೀರಿನ ನಿರ್ವಹಣೆ ಸೇರಿದಂತೆ 25 ಅತ್ಯುನ್ನತ ಕೇಂದ್ರಗಳನ್ನು ನಡೆಸುತ್ತಿದೆ. ಇಷ್ಟು ವ್ಯಾಪಕ ಕ್ಷೇತ್ರಗಳಲ್ಲಿ ಅತ್ಯುನ್ನತ ಕೇಂದ್ರಗಳನ್ನು ಹೊಂದಿರುವ ರಾಜ್ಯವನ್ನು ಭಾರತದಲ್ಲಿ ಇನ್ನೂ ಕಾಣಲು ಸಾಧ್ಯವಿಲ್ಲ. ಕರ್ನಾಟಕವು ನಿಜವಾದ ನವೀನತ ಕೇಂದ್ರವಾಗಿದೆ. 2024ರ ವೇಳೆಗೆ ಭಾರತದ ಆರ್ಥಿಕತೆ 151 ಬಿಲಿಯನ್ ಡಾಲರ್ಗೆ ತಲುಪಲಿದೆ. ಈ ವೇಗದ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲೇ ಉಳಿಯಲಿದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ 20,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ನೋಂದಾಣಿಗೊಂಡಿದ್ದು, ಸರ್ಕಾರದ ನೀತಿಗಳು ಅಕಾಡೆಮಿಕ್ ಕ್ಷೇತ್ರ ಹಾಗೂ ಕೈಗಾರಿಕೆಯನ್ನು ಸಮನ್ವಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವು ಭಾರತದಲ್ಲಿನ ಸ್ಟಾರ್ಟ್ಅಪ್ಗಳ ರಾಜಧಾನಿಯಾಗಿ ಬೆಳೆದು, ಮುಂದಿನ ದಶಕಗಳಲ್ಲಿ 200 ಟ್ರಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ಸಾಮರ್ಥ್ಯ ಹೊಂದಿದೆ.
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ನಿಟ್ಟೆ ವಿವಿ ಕುಲಪತಿ ಪ್ರೊ ಎಂ.ಎಸ್.ಮೂಡಿತ್ತಾಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ ಮೊದಲಾದವರು ಉಪಸ್ಥಿತರಿದ್ದರು. ನಿಟ್ಟೆ ವಿವಿ ಕುಲಪರಿ ಪ್ರೊ.ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಎನ್ ಯುಸಿಎಸ್ ಇಆರ್ ನಿರ್ದೇಶಕ ಪ್ರೊ.ಅನಿರ್ಬನ್ ಚಕ್ರಬೊರ್ತಿ ವಂದಿಸಿದರು. ಡಾ.ಅಕ್ಷತಾ ನಿರೂಪಿಸಿದರು.