ಮಂಗಳೂರು, ಕ ಸೆ. 25 (DaijiworldNews/AK):ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ವಿಭಾಗದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿಗಾಗಿ ಡಿಸೆಂಬರ್ 15 ರವರೆಗೆ ಲೈನ್ ಬ್ಲಾಕ್ ವಿಧಿಸುವ ನೈರುತ್ಯ ರೈಲ್ವೆಯ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯ ಅನುಮೋದಿಸಿದೆ. ಪರಿಣಾಮವಾಗಿ, ಹಲವಾರು ಹಗಲಿನ ರೈಲುಗಳ ರದ್ದತಿಯನ್ನು ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 16539 ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ರೈಲು ಡಿಸೆಂಬರ್ 13 ರವರೆಗೆ ರದ್ದಾಗಿದ್ದು, ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ರೈಲು ಡಿಸೆಂಬರ್ 14 ರವರೆಗೆ ರದ್ದಾಗಿದೆ. ರೈಲು ಸಂಖ್ಯೆ 16575 ರ ವಾರದಲ್ಲಿ ಮೂರು ದಿನ ಇರುವ ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ಡಿಸೆಂಬರ್ 14 ರವರೆಗೆ ರದ್ದಾಗಿದ್ದು, ರೈಲು ಸಂಖ್ಯೆ 16576ರ ವಾರದಲ್ಲಿ ಮೂರು ದಿನ ಇರುವ ಮಂಗಳೂರು ಜಂಕ್ಷನ್-ಯಶವಂತಪುರದ ಗೋಮಟೇಶ್ವರ ಎಕ್ಸ್ಪ್ರೆಸ್ ಡಿಸೆಂಬರ್ 15 ರವರೆಗೆ ರದ್ದಾಗಿದೆ.
ಅದೇ ರೀತಿ, ರೈಲು ಸಂಖ್ಯೆ 16515ರ ವಾರದಲ್ಲಿ ಮೂರು ದಿನ ಇರುವ ಯಶವಂತಪುರ - ಕಾರವಾರ ರೈಲು ಡಿಸೆಂಬರ್ 15 ರವರೆಗೆ ರದ್ದಾಗಲಿದ್ದು, ರೈಲು ಸಂಖ್ಯೆ 16516ರ ವಾರದಲ್ಲಿ ಮೂರು ದಿನ ಇರುವ ಕಾರವಾರ - ಯಶವಂತಪುರ ರೈಲು ಡಿಸೆಂಬರ್ 16 ರವರೆಗೆ ರದ್ದಾಗಲಿದೆ.