ಕಾಸರಗೋಡು, ಸೆ. 25 (DaijiworldNews/TA): ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ತಾಳೆಗರಿಯನ್ನು ತೆಗೆಯಲೆತ್ನಿಸುತ್ತಿದ್ದಾಗ ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಉದುಮ ಸಮೀಪದ ವಳಿಯವಲಪ್ಪು ಎಂಬಲ್ಲಿ ನಡೆದಿದೆ. ವಳಿಯವಲಪ್ಪುವಿನ ಅಶ್ವಿನ್ ಅರವಿಂದ (18) ಮೃತಪಟ್ಟವರು.

ಸರ್ವೀಸ್ ವಯರ್ ಮೇಲೆ ಬಿದ್ದಿದ್ದ ತಾಳೆಗರಿಯನ್ನು ಬಾವಿಯ ಕಟ್ಟೆಗೆ ಹತ್ತಿ ತೆಗೆಯಲೆತ್ನಿಸುತ್ತಿದ್ದಾಗ ಅಶ್ವಿನ್ ಬಾವಿಗೆ ಬಿದ್ದಿದ್ದು, ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆತ ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.