ಸುಳ್ಯ, ಸೆ. 26(DaijiworldNews/TA): ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ಗಣಹೋಮ, ದುರ್ಗಾಪೂಜೆ,ಭಜನಾ ಸತ್ಸಂಗ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 230ನೇ ಕೃತಿಮಾಲೆ ಜೀವನ್ಮುಕ್ತನಾಗು ಬಿಡುಗಡೆ ಸಮಾರಂಭ ನಡೆಯಿತು.

ಸುಳ್ಯ ಕೆ.ವಿ.ಜಿ ಕಾನೂನು ಕಾಲೇಜಿನ ಉಪನ್ಯಾಸಕಿ ಸವಿತ ಅವರು ಸ್ವಾಮೀಜಿ ಕೃತಿಮಾಲೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಸ್ವಾಮೀಜಿಯರು ಪುಸ್ತಕ ಬರೆದು ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ರೇಷ್ಠ ಕೆಲಸ. ಇವರ ಸರಳ ಬರಣಿಗೆ ಸುಲಭವಾಗಿ ಅರ್ಥವಾಡಿಕೊಂಡು ಓದಬಹುದಾಗಿದೆ. ಎಲ್ಲರೂ ಪುಸ್ತಕಕೊಂಡು ಓದಿ ಎಂದು ಹೇಳಿದರು. ಸ್ವಾಮೀಜಿಯವರು ನವರಾತ್ರಿಯ ವಿಶೇಷತೆಯ ಬಗ್ಗೆ ತಿಳಿಸಿದರು. ವೇಣುಗೋಪಾಲ ಅಡೂರು, ಚಿತ್ರಕುಮಾರ ಮುಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಡಾ.ಸಾಯಿಗೀತಾ,ಶಿಕ್ಷಕಿ ಸುನಂದ ಉಪಸ್ಥಿತರಿದ್ದು ಮಾತನಾಡಿದರು.