ಮಂಜೇಶ್ವರ,ಸೆ. 26(DaijiworldNews/TA): ಶಾಲಾ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ಸೆ.೨೫ರಂದು ಉದ್ಯಾವರ ದಲ್ಲಿರುವ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತರಗತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಭಾರೀ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ . ಬೆಳಿಗ್ಗೆ 8.30 ರ ಸುಮಾರಿಗೆ ಘಟನೆ ನಡೆದಿದೆ.


ಎರಡನೇ ತರಗತಿಯ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಮಕ್ಕಳು ತರಗತಿಗೆ ತಲುಪಿರಲಿಲ್ಲ. ಹಂಚು ಹಾಸಿದ ಶಾಲೆಯ ಕೆಳಗೆ ಅಳವಡಿಸಲಾದ ಸ್ಲಾಬ್ ಕುಸಿದು ಬಿದ್ದಿದೆ . ಸಮೀಪದಲ್ಲಿದ್ದ ಶಾಲಾ ಸಿಬಂದಿ್ಗಳು ಅಪಾಯವಿಲ್ಲದೆ ಪಾರಾದರು. ವರ್ಷಗಳ ಹಳೆಯದಾದ ಈ ಶಾಲಾ ಕಟ್ಟಡ ಪುನರ್ ನಿರ್ಮಿಸಬೇಕು ಎಂಬ ಒತ್ತಾಯ ಹಲವು ಸಮಯಗಳಿಂದ ಕೇಳಿ ಬರುತ್ತಿದೆ.