ಬಂಟ್ವಾಳ, ಸೆ. 26(DaijiworldNews/TA): ಪುದು ಗ್ರಾ.ಪಂ.ನ ಎರಡನೇ ಅಧ್ಯಕ್ಷರಾಗಿ ರಮ್ಲಾನ್ ಮಾರಿಪಳ್ಳ ಹಾಗೂ ಉಪಾಧ್ಯಕ್ಷೆಯಾಗಿ ರುಕ್ಸಾನಾ ಅಮ್ಮೆಮಾರ್ ಅವರು ಆಯ್ಕೆಯಾಗಿದ್ದಾರೆ. ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಗ್ರಾ.ಪಂ.ಕಚೇರಿಯಲ್ಲಿ ಸೆ.25ರಂದು ನಡೆಯಿತು.

ಚುನಾವಣಾ ಅಧಿಕಾರಿ ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿದರು. ರಮ್ಲಾನ್ ಮಾರಿಪಳ್ಳ ಅವರು 2017 ರಿಂದ 2022 ರ ತನಕ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಗ್ರಾ.ಪಂ.ನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿರುವುದರಿಂದ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತರಿಕ ಸಭೆ ನಡೆಸಿ ಒಮ್ಮತದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ರಮ್ಲಾನ್ ಮಾರಿಪಳ್ಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರುಕ್ಸಾನ ಅವರನ್ನು ಆಯ್ಕೆ ಮಾಡಿತ್ತು.
ಕೆ.ಆಸೀಫ್ ಇಕ್ಬಾಲ್ ಹಾಗೂ ಸಮೀರ್ ಪಜೀರ್ ಅವರನ್ನು ಚುನಾವಣಾ ವೀಕ್ಷರನ್ನಾಗಿ ನೇಮಕ ಮಾಡಿತ್ತು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ಅಹಮದ್ ದಿರ್ಶಾದ್,ಮುಖಂಡರುಗಳಾದ ಮಹಮ್ಮದ್ ಬುಖಾರಿ ಕುಂಪಣಮಜಲು, ಎಂ.ಕೆ.ಮಹಮ್ಮದ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.