ಕಾರ್ಕಳ, ಸೆ. 26 (DaijiworldNews/AA): ಸತ್ತ ದನವೊಂದನ್ನು ದುಷ್ಕರ್ಮಿಗಳು ಎಸೆದು ಹೋದ ಘಟನೆ ಕಾರ್ಕಳ ತಾಲೂಕಿನ ಕಾಂತಾವರ-ಬಾರಾಡಿ ಕ್ರಾಸ್ ಎಂಬಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಮಾಹಿತಿ ತಿಳಿದ ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಎಸೆದು ಹೋದ ಸತ್ತ ದನ ಮೇಲೆ ಕುರುಚಲು ಗಿಡಗಳನ್ನು ಮುಚ್ಚಿಹಾಕಲಾಗಿರುವುದು ಕಂಡು ಬಂದಿದೆ. ದನದ ಹೊಟ್ಟೆ ಬಾತು ಹೋಗಿದೆ. ಘಟನಾ ಪಕ್ಕದಲ್ಲಿ ದಫನ ಕ್ರಿಯೆ ನಡೆಸಲಾಗಿದೆ.