ಬಂಟ್ವಾಳ, 28 (DaijiworldNews/TA): ಮನೆಯಲ್ಲಿ ಮೊಬೈಲ್ ಬಿಟ್ಟು ಕಾಣೆಯಾಗಿದ್ದ ಉದ್ಯಮಿಯೊರ್ವರು ಮಂತ್ರಾಲಯ ದೇವಸ್ಥಾನದಲ್ಲಿ ಪತ್ತೆಯಾಗಿದ್ದು, ಪೋಲಿಸರು ಸುರಕ್ಷಿತವಾಗಿ ಮನೆಗೆ ಕರೆ ತಂದಿರುವ ಘಟನೆ ನಡೆದಿದೆ. ಬಂಟ್ವಾಳ ತಾ. ಸಜೀಪ ಮೂಡ ಕಂದೂರು ನಿವಾಸಿ ಸದಾನಂದ ( 50) ಕಾಣೆಯಾಗಿದ್ದ ವ್ಯಕ್ತಿ. ಸಜೀಪ ಮೂಡ ಗ್ರಾಮದ ಕಂದೂರು ನಿವಾಸಿ ಸದಾನಂದ(50) ಎಂಬವರು ಸಜೀಪದ ಕಂದೂರು ಎಂಬಲ್ಲಿ ಎಸ್.ಕೆ.ಸುವರ್ಣ ಸೌಂಡ್ಸ್ & ಲೈಟಿಂಗ್ ಅಂಗಡಿ ಮಾಲಕರಾಗಿದ್ದಾರೆ.

ಇವರು ಸೆ.16 ರಂದು ಸಂಜೆ 4.30 ರ ವೇಳೆ ತನ್ನ ಮೊಬೈಲ್ ನ್ನು ಮನೆಯ ಬಳಿ ಟೆಂಪೋದಲ್ಲಿ ಬಿಟ್ಟು ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ರೋಹಿಣಿ ಅವರು ನಗರ ಪೋಲಿಸ್ ಠಾಣೆಗೆ ನೀಡಿದ ದೂರು ನೀಡಿದ್ದರು. ದೂರು ಸ್ವೀಕರಿಸಿದ ಬಂಟ್ವಾಳ ನಗರ ಠಾಣಾ ಪೋಲಿಸರ ತಂಡ ಪತ್ತೆ ಕಾರ್ಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದಾಗ ಇವರ ಮೊಬೈಲ್ ಫೋನ್ ಗೆ ಸರಕಾರಿ ಬಸ್ ಟಿಕೆಟ್ ಮಾಡಿದ ಸಂದೇಶವೊಂದು ಬಂದಿರುವುದು ಕಂಡು ಬಂದಿತ್ತು.
ಈ ಮೇಸೆಜ್ ಬೆನ್ನತ್ತಿಹೋದಾಗ ಅವರು ಮಂತ್ರಾಲಯದಲ್ಲಿ ಇರುವ ವಿಚಾರ ಗಮನಕ್ಕೆ ಬಂದಿದ್ದು,ಅವರು ಸುರಕ್ಷಿತವಾಗಿ ಮನೆಗೆ ತಲುಪಿದ್ಧಾರೆ. ಮಂತ್ರಾಲಯಕ್ಕೆ ಹೋಗುವ ವಿಚಾರ ಮನೆಯಲ್ಲಿ ಮಾತನಾಡಿದ್ದು, ಮನೆಯವರು ಹೋಗುವುದಕ್ಕೆ ಮುಂದಾಗದೆ ಇರುವುದಕ್ಕೆ ಹೋಗಿರುವುದಾಗಿ ತಿಳಿಸಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.