ಮಂಗಳೂರು, 28 (DaijiworldNews/TA): ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಆದೇಶದಂತೆ ವಿಜೃಂಭನೆಯ ಸಮಸ್ತ ಪ್ರರ್ಥಾನ ದಿನ ಕಾರ್ಯಕ್ರಮ ಮಂಗಳೂರು ಹೊರವಲಯದ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ದ ಸಭಾಂಗಣದಲ್ಲಿ ನೆರವೇರಿತು. ಸಮಾರಂಭವನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುವಾ ಮೂಲಕ ಉದ್ಘಾಟಿಸಿದರು. ಈ ವೇಳೆ ಮದರಸಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಶ್ರಮಿಸಿದ ಹಿರಿಯನ್ನು ಗುರುತಿಸಿ ಮಸೀದಿ ಅಧ್ಯಕ್ಷರಾದ ಎ.ಪಿ ಇಕ್ಬಾಲ್ ಅವರು ಗೌರವಿಸಿದರು.







ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಮಾಜಿ ಅಧ್ಯಕ್ಷರುಗಳಾದ ಎಸ್ ಆಲಿಯಬ್ಬ, ಹಾಜಿ ಮಹಮ್ಮದ್ ಹನೀಫ್, ಮೂಸಬ್ಬ, ಜಬ್ಬಾರ್ ಎಂಡಿ, ಹಿರಿಯರಾದ ಮಹಮ್ಮದ್ ಶರೀಫ್, ಮಾಜಿ ಕಾರ್ಯದರ್ಶಿ ಮಹಮ್ಮದ್ ಹನೀಫ್, ಅಬ್ದುಲ್ ಖಾದರ್, ಹಿರಿಯರಾದ ರಝಾಕ್ ಮಂದಾರ, ಸಿದ್ದೀಕ್ ಪಿಲಿಕುಳ, ಬದ್ರುದ್ದೀನ್ ವಾಮಂಜೂರು, ಬದ್ರುದ್ದೀನ್ ಪಿಲಿಕುಳ, ಹಮೀದ್ ಕುಳೂರು, ಟಿ ಮಹಮ್ಮದ್, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್, ಅಬ್ದುಲ್ ಖಾದರ್ ಎ ಕೆ, ಸದರ್ ಉಸ್ತಾದ್ ಝುಬೈರ್ ಯಮಾನಿ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಸಾಜುದ್ದೀನ್, ಜೊತೆ ಕಾರ್ಯದರ್ಶಿ ಮಹಮ್ಮದ್ ಅರೀಫ್, ಕೋಶಾಧಿಕಾರಿ ಇಮ್ರಾನ್ ಆಲಿ, ಸದಸ್ಯರಾದ ಅತಾವುಲ್ಲಾ, ಮುಸ್ತಾಫ ಎಂ.ಡಿ, ಅಕ್ಬರ್, ಹನೀಫ್ ಕಳಾಯಿ, ಅಹ್ಮದ್ ಬಾವ ಮತ್ತಿತರರು ಉಪಸ್ಥಿತರಿದ್ದರು.