ಮಂಗಳೂರು, ಅ. 06 (DaijiworldNews/AA): ರಾಜ್ಯ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮಂಗಳೂರು ಬೋಂದೆಲ್ ನ ಸಂತ ಲಾರೆನ್ಸರ ದೇವಾಲಯ ಹಾಗೂ ಪುಣ್ಯಕ್ಷೇತ್ರಕ್ಕೆ ಭಾನುವಾರ ಭೇಟಿ ಪ್ರಾರ್ಥನೆ ಸಲ್ಲಿಸಿದರು.









ಸಂತ ಲಾರೆನ್ಸರ ದೇವಾಲಯ ಹಾಗೂ ಪುಣ್ಯಕ್ಷೇತ್ರದ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಲಾರೆನ್ಸ್ ಕುಟಿನ್ಹಾ ಹಾಗೂ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾದರ್ ಪೀಟರ್ ಗೊನ್ಸಾಲ್ವಿಸ್ ಅವರು ಸಚಿವರನ್ನು ಬರಮಾಡಿಕೊಂಡರು.
ಈ ಸಂದರ್ಭ ಪುಣ್ಯಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ ಸಚಿವರನ್ನು ದೇವಾಲಯದ ಮಾಜಿ ಉಪಾಧ್ಯಕ್ಷ ರೂಡಿ ಪಿಂಟೋ ಹಾಗೂ ಪ್ರಸ್ತುತ ಉಪಾಧ್ಯಕ್ಷರಾದ ಜೋನ್ ಡಿಸಿಲ್ವಾ ಅವರು ದೇವಾಲಯದ ಪರವಾಗಿ ಸನ್ಮಾನಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮಾಜಿ ಶಾಸಕ ಜೆ.ಆರ್ ಲೋಬೊ, ರಚನಾ ಸಂಸ್ಥೆಯ ಅಧ್ಯಕ್ಷರಾದ ಜೋನ್ ಮೊಂತೆರೋ, ಭೂನ್ಯಾಯ ಮಂಡಳಿ ಸದಸ್ಯ ನೆಲ್ಸನ್ ಮೊಂತೆರೋ, ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.