ಕಾಸರಗೋಡು, ಅ. 08 (DaijiworldNews/TA): ಪೆರ್ಲ ಕಾಟುಕುಕ್ಕೆ ನಿವಾಸಿ, ಆಟೋ ಚಾಲಕನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ. ಕಾಟುಕುಕ್ಕೆ ಸೂರ್ಡೆಲು ನಿವಾಸಿ ತಾರಾನಾಥ ರೈ (46) ಮೃತಪಟ್ಟವರು.

ಶುಕ್ರವಾರ ಮಧ್ಯಾಹ್ನ ತಲೆ ತುಂಡರಿಸ ಲ್ಪಟ್ಟ ಸ್ಥಿತಿಯಲ್ಲಿ ರೈಲು ಕುಂಬಳೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇವರ ಬಳಿ ಇದ್ದ ಎಟಿಎಂ ಕಾರ್ಡ್ ನ ನೆರವಿನಿಂದ ಕುಂಬಳೆ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕುಂಬಳೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.