ಉಡುಪಿ, ಅ. 14(DaijiworldNews/TA): ಉಡುಪಿ ಜಿಲ್ಲಾ ರಸ್ತೆ ಸಾರಿಗೆ ಅಧಿಕಾರಿ (ಆರ್ಟಿಒ) ಲಕ್ಷ್ಮಿನಾರಾಯಣ ಪಿ ನಾಯಕ್ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಹಠಾತ್ ದಾಳಿ ನಡೆಸಿದ್ದಾರೆ.




ಅಕ್ರಮಗಳ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಯಿತು ಎನ್ನಲಾಗಿದೆ. ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಅವರ ಅಪಾರ್ಟ್ಮೆಂಟ್ ಹಾಗೂ ಕುಮಟಾ (ಉತ್ತರ ಕನ್ನಡ ಜಿಲ್ಲೆ) ಮತ್ತು ಪಡು ಅಲೆವೂರಿನಲ್ಲಿರುವ ಅವರ ಸಂಬಂಧಿಕರ ನಿವಾಸಗಳಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕುಮಟಾ ಮೂಲದ ಲಕ್ಷ್ಮಿನಾರಾಯಣ ಪಿ ನಾಯಕ್ ಪ್ರಸ್ತುತ ಉಡುಪಿಯಲ್ಲಿ ಆರ್ಟಿಒ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತಂಡವು ಪಡು ಅಲೆವೂರಿನ ರವಿ ಎಂಬವರ ಮನೆಯಲ್ಲೂ ಶೋಧ ನಡೆಸಿದೆ ಎಂಬುವುದು ವರದಿಯಾಗಿದೆ.