ಕಾಸರಗೋಡು, ಅ. 14 (DaijiworldNews/AK): ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉದ್ಯಾವರ ಜಮಾಲುದ್ದೀನ್ ಫೈಝಲ್ ( 39) ಮತ್ತು ಹೊಸಬೆಟ್ಟು ವಿನ ರಾಫಿಲ್ (45) ಬಂಧಿತ ಆರೋಪಿ.
ಎರಡು ದಿನಗಳ ಹಿಂದೆ ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಕಾರಿನಲ್ಲಿ ಬಂದ ಇವರು ಮೊಬೈಲ್ ನಂಬ್ರ ಗಳನ್ನು ನೀಡುವಂತೆ ಕಿರುಕುಳ ನೀಡಲೆತ್ನಿ ಸಿದ್ಧರು ಎನ್ನಲಾಗಿದೆ. ಬಳಿಕ ವಿದ್ಯಾರ್ಥಿ ನಿಯರು ತಪ್ಪಿಸಿ ಮನೆಗೆ ತಲಪಿದ್ದರು.ಈ ಬಗ್ಗೆ ವಿದ್ಯಾರ್ಥಿನಿ ಯರು ಮಂಜೇಶ್ವರ ಠಾಣೆ ಗೆ ನೀಡಿದ ದೂರಿನಂತೆ ಇಬ್ಬರನ್ನು ಬಂಧಿಸಲಾಗಿದೆ