ಮೂಡುಬಿದಿರೆ,ಅ. 14 (DaijiworldNews/AK): ಇಲ್ಲಿನ ನಿಡ್ಡೋಡಿಯ ಕಲ್ಲಕುಮೇರು ಎಂಬಲ್ಲಿ ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಮನೆಗೆ ಕರೆದು ಗ್ಯಾಂಗ್ ರೇಪ್ ಮಾಡುವ ಸಂಚು ನಡೆಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಿಡ್ಡೋಡಿ ಕಲ್ಲಕುಮೇರು ನಿವಾಸಿ ಮಹೇಶ್, ಬಜ್ಪೆ ಕೊಂಡೆಮೂಲೆ ನಿವಾಸಿ ಶ್ರೀಕಾಂತ್, ಕಟೀಲು ನಿವಾಸಿ ಯಜ್ಞೇಶ್, ಮೂಲ್ಕಿ ನಡುಗೋಡೆ ನಿವಾಸಿ ದಿಲೀಪ್ ಯಾನೆ ದೀಪು ಬಂಧಿತ ಆರೋಪಿಗಳು.
ಆರೋಪಿ ಮಹೇಶ್ ರಿಕ್ಷಾ ಚಾಲಕನಾಗಿದ್ದು, ದೇವಸ್ಥಾನದಿಂದ ರಿಕ್ಷಾದಲ್ಲಿ ಮರಳುತ್ತಿದ್ದ ಅಪ್ರಾಪ್ತ ಯುವತಿಯ ಮೊಬೈಲ್ ಸಂಖ್ಯೆಯನ್ನು ಬಾಡಿಗೆಯ ನೆಪದಲ್ಲಿ ಪಡೆದುಕೊಂಡಿದ್ದ. ಆಗಾಗ ಮೆಸೇಜ್ ಕರೆ ಮಾಡಿ ತಾನು ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಮದುವೆಯಾಗುವುದಾಗಿ ಹೇಳುತ್ತಿದ್ದ. ಯುವತಿಯನ್ನು ಕಿನ್ನಿಗೋಳಿಗೆ ಬರುವಂತೆ ಕರೆದು, ತನ್ನ ಗೆಳತಿಯೊಂದಿಗೆ ಬಂದಿದ್ದ ಯುವತಿಯನ್ನು ತನ್ನ ರಿಕ್ಷಾದಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದು, ಗೆಳತಿಯನ್ನು ಹಾಲ್ನಲ್ಲಿ ಕುಳ್ಳಿರಿಸಿ ಯುವತಿಯನ್ನು ಒಳಗೆ ಕರೆದುಕೊಂಡು ಹೋಗಿ ಅಪ್ರಾಪ್ತ ಯುವತಿಯ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.
ಮನೆ ಕ್ಲೀನ್ ಮಾಡುವ ನೆಪದಲ್ಲಿ ಯುವತಿಯನ್ನು ಮತ್ತು ಅವಳ ಗೆಳತಿಯನ್ನು ಮನೆಗೆ ಕರೆದಿದ್ದು ಕಿನ್ನಿಗೋಳಿಯಿಂದ ಸ್ಕೂಟರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಮಹೇಶ ಅಪ್ರಾಪ್ತ ಯುವತಿಯನ್ನು ಮನೆಯೊಳಗೆ ಬಲವಂತದಿಂದ ಅತ್ಯಾಚಾರ ಮಾಡಿದ್ದು, ಇತರ ಆರೋಪಿಗಳಾದ ಶ್ರೀಕಾಂತ್, ದಿಲೀಪ್, ಯಜ್ಞೇಶ್ ಅವರು ಮನೆಯ ವರಾಂಡದಲ್ಲಿ ಗ್ಯಾಂಗ್ ರೇಪ್ ಮಾಡಲು ಸಂಚು ಹಾಕಿ ಕಾಯುತ್ತಿದ್ದರು ಎನ್ನಲಾಗಿದೆ.
ಮಾಹಿತಿ ಪಡೆದ ಕೂಡಲೇ ತಕ್ಷಣ ಸ್ಪಂದಿಸಿದ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆಯ ವೇಳೆ ಆರೋಪಿಗಳು ತಮ್ಮ ಸಂಚಿನ ಕುರಿತು ಬಾಯಿಬಿಟ್ಟಿದ್ದು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ಸಮಯಪ್ರಜ್ಞೆ ಸಂಭಾವ್ಯ ಗ್ಯಾಂಗ್ ರೇಪ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯ ವೇಳೆ ಮನೆಯಲ್ಲಿ ಕಾಂಡೋಮ್ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ, , ಆರೋಪಿಗಳ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.