ಕಾಸರಗೋಡು, ಅ. 17 (DaijiworldNews/AK): ವರ್ಕಾಡಿ ಸುಳ್ಯಮೆ ಯಿಂದ ಸುಮಾರು 116 ಕಿಲೋ ಗಾಂಜಾ ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಯಪುರ ಹೋಬಳಿಯ ಸಿದ್ದೇಗೌಡ (25) ಬಂಧಿತ ಆರೋಪಿ. ಸುಳ್ಯಮೆಯ ಮನೆಯ ಶೆಡ್ ವೊಂದರಲ್ಲಿ ಬಚ್ಚಿಟ್ಟಿದ್ದ ಗಾಂಜಾ ವನ್ನು ಅಕ್ಟೋಬರ್ 8 ರಂದು ರಾತ್ರಿ ವಶಪಡಿಸಿಕೊಂಡಿದ್ದರು.
ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಮಿನಿ ಟೆಂಪೋ ವನ್ನು ವಶಕ್ಕೆ ತೆಗೆದುಕೊಂಡಿದ್ದರು ಪೊಲೀಸರು ನಡೆಸಿದ ತನಿಖೆಯಿಂದ ವಾಹನ ಚಾಲಕ ಸಿದ್ದೇ ಗೌಡ ನ ಮಾಹಿತಿ ಲಭಿಸಿತ್ತು. ತನಿಖೆಯನ್ನು ಮೈಸೂರಿಗೆ ವಿಸ್ತರಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.