ಬೈಂದೂರು, ಅ. 19 (DaijiworldNews/TA): ಶಿರೂರು ಗ್ರಾಮದ ಕೆಳಪೇಟೆಯಲ್ಲಿ ಶನಿವಾರ ಮಧ್ಯಾಹ್ನ ಬೊಲೆರೊ ಪಿಕಪ್ ವಾಹನ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶಿರೂರು ಗ್ರಾಮದ ಹಡವಿಂಕೋಣೆಯ ನ್ಯೂ ಕಾಲೋನಿಯ ನಿವಾಸಿ ಕಾರಾ ಇಲ್ಯಾಸ್ (49) ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಮೀನು ತುಂಬಿದ್ದ ಬೊಲೆರೊ ಪಿಕಪ್ ಟ್ರಕ್ ಮಲ್ಪೆಯಿಂದ ಭಟ್ಕಳದ ಕಡೆಗೆ ಹೋಗುತ್ತಿದ್ದಾಗ ಶಿರೂರು ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕ ತಕ್ಷಣವೇ ಸಾವನ್ನಪ್ಪಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.