ಬಂಟ್ವಾಳ, ಅ. 19 (DaijiworldNews/TA): ಪುರಸಭಾ ಸಾಮಾನ್ಯ ಸಭೆ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ಅಕ್ಟೋಬರ್ 18 ರಂದು ನಡೆಯಿತು.


ಕಂಚಿನಡ್ಕಪದವು ಎಂಬಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕ ಅಧಿಕಾರಿಗಳಿಗೆ ಹಣ ಮಾಡಲು ಇರುವ ಕೇಂದ್ರವಾಗಿದೆ ಹೊರತು ಪುರಸಭೆಯ ಕಸವನ್ನು ವಿಲೇವಾರಿ ಘಟಕವಾಗಿಲ್ಲ. ಘಟಕದ ಸುತ್ತಮುತ್ತಲಿನ ಗ್ರಾ.ಪಂಚಾಯತ್ ನಿಂದ ಹಾಗೂ ಬೇರೆ ತಾಲೂಕಿನ ತ್ಯಾಜ್ಯಗಳು ಬಂದು ಶೇಖರಣೆಯಾಗುತ್ತಿದೆ. ಇಲ್ಲಿರುವ ಕೋಟ್ಯಾಂತರ ರೂ ಮೌಲ್ಯದ ಯಂತ್ರಗಳು ತುಕ್ಕುಹಿಡಿದಿದೆ. ಘಟಕದದೊಳಗೆ ತ್ಯಾಜ್ಯ ರಾಶಿಗಳು ತುಂಬಿದ್ದು, ಮತ್ತೊಂದು ಪಚ್ಚನಾಡಿ ಆಗುವುದನ್ನು ಕಾಣುತ್ತೇವೆ ಎಂದು ಹಿರಿಯ ಸದಸ್ಯ ಎ .ಗೋವಿಂದ ಪ್ರಭು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಕ್ರಮ ಗೂಡಂಗಡಿಗಳನ್ನು ತೆರವು ಮಾಡುವಂತೆ ಸದಸ್ಯ ಹರಿಪ್ರಸಾದ್ ಒತ್ತಾಯ ಮಾಡಿದರು. ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಖರೀದಿಸಲು ಜನರು ಮುಂದಾಗುವ ವೇಳೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು. ಇದರ ಜೊತೆಗೆ ಅನುಮತಿ ಪಡೆಯದೆ ಹಾಕಲಾದ ಪ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಮಾಡುವಂತೆ ಅಧಿಕಾರಗಳಿಗೆ ತಿಳಿಸಿದರು.. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು..ಸಭೆಯಲ್ಲಿ ಉಪಾಧ್ಯಕ್ಷ ಮೊನಿಸ್ ಆಲಿ, ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.