ಉಡುಪಿ, ಅ. 19 (DaijiworldNews/AA): ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ವತಿಯಿಂದ ಕಿಶೂ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಜನಪ್ರಿಯ ರಾಜ್ಯಮಟ್ಟದ ಗಾಯನ ರಿಯಾಲಿಟಿ ಶೋ ದಾಯ್ಜಿವರ್ಲ್ಡ್ ಸ್ವರ ಸಾಗರದ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಪ್ರತಿಭೆ ಮತ್ತು ಸ್ಪರ್ಧಾತ್ಮಕತೆಯಿಂದ ಕೂಡಿದ ಸುಮಾರು ಒಂದು ವರ್ಷದ ಸಂಗೀತಯಾತ್ರೆಯ ನಂತರ, ಅತ್ಯುತ್ತಮ ಏಳು ಸ್ಪರ್ಧಿಗಳು ಕಾತರದಿಂದ ನಿರೀಕ್ಷಿಸಲಾದ ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.












ಆಡಿಷನ್ ಹಂತದಲ್ಲಿ ಆಯ್ಕೆಗೊಂಡ 40 ಕ್ಕೂ ಹೆಚ್ಚು ಸ್ಪರ್ಧಿಗಳ ಪೈಕಿ 11 ಮಂದಿ ಪ್ರತಿಭಾವಂತ ಹಾಡುಗಾರರು ತಮ್ಮ ಗಾಯನ ಕೌಶಲ್ಯದೊಂದಿಗೆ ತೀರ್ಪುಗಾರರ ಮೆಚ್ಚುಗೆ ಗಳಿಸಿ ಸೆಮಿಫೈನಲ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈಗ, ಅತ್ಯುತ್ತಮ 7 ಮಂದಿ ಸ್ಪರ್ಧಿಗಳು ದಾಯ್ಜಿವರ್ಲ್ಡ್ ಸ್ವರ ಸಾಗರದ ಗ್ರ್ಯಾಂಡ್ ಫಿನಾಲೆಗೆ ಪ್ರವೇಶಿಸಿದ್ದಾರೆ.
ಅಂತಿಮ ಹಂತದ 7 ಫೈನಲಿಸ್ಟ್ಗಳು:
* ಮೆಲೊನಾ ಕ್ಲಿಷಾ (ಮಂಗಳೂರು, ದಕ್ಷಿಣ ಕನ್ನಡ)
* ಯಶಸ್ ರಾವ್ (ದೆರೆಬೈಲ್, ದಕ್ಷಿಣ ಕನ್ನಡ)
* ಸ್ನೇಹಿತ್ ಸುರೇಂದ್ರನ್ (ಮಂಗಳೂರು, ದಕ್ಷಿಣ ಕನ್ನಡ)
* ಮಧುರಾ ಶೆಣೈ (ಮಂಗಳೂರು, ದಕ್ಷಿಣ ಕನ್ನಡ)
* ಕಾರ್ತಿಕ್ (ಸೊರಬ, ಶಿವಮೊಗ್ಗ)
* ಭವ್ಯಶ್ರೀ ಆಚಾರ್ಯ (ಬಾರ್ಕೂರು, ಉಡುಪಿ)
* ಮೊಹಿತ್ ಭಟ್ (ಬ್ರಹ್ಮಾವರ, ಉಡುಪಿ)
ತಮ್ಮ ವಿಶಿಷ್ಟ ಗಾಯನ ಶೈಲಿ, ವೇದಿಕೆ ಮೇಲಿನ ಅತ್ಯುತ್ತಮ ಪ್ರದರ್ಶನ ಮತ್ತು ಸಂಗೀತಾತ್ಮಕ ಸೃಜನಶೀಲತೆಯಿಂದ ಪ್ರತಿ ಫೈನಲಿಸ್ಟ್ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಈ ಸ್ಪರ್ಧೆಯು ಪ್ರೇರಣಾದಾಯಕ ಮತ್ತು ಸ್ಮರಣೀಯವಾಗಿದೆ.
ಮೂರು ಅದ್ಭುತ ಸುತ್ತುಗಳನ್ನೊಳಗೊಂಡ ಗ್ರ್ಯಾಂಡ್ ಫಿನಾಲೆ, ಪ್ರತಿಭೆ, ಮತ್ತು ಕಲೆಯ ಮಹೋತ್ಸವವಾಗಿದ್ದು, ಈ ಯುವ ಗಾಯಕರ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯಲಿದೆ.
ದಾಯ್ಜಿವರ್ಲ್ಡ್ ಸ್ಚರ ಸಾಗರ ಸ್ಪರ್ಧೆಯ ವಿವಿಧ ಹಂತಗಳಲ್ಲಿ ಮಧುರ ಸ್ವರ ಸಾಗರ, ಸುಗಮ ಸ್ವರ ಸಾಗರ, ಅರ್ಪಣ ಸ್ವರ ಸಾಗರ, ಜನಪದ ಸ್ವರ ಸಾಗರ, ಯುಗಳ ಗೀತೆ, ಮನೋಧರ್ಮ, ಹಾಗೂ ಸೆಮಿಫೈನಲ್ನಲ್ಲಿ ಸೆಮಿ ಕ್ಲಾಸಿಕಲ್ ಸುತ್ತುಗಳನ್ನು ಒಳಗೊಂಡಿತ್ತು.
ಮಮತಾ ಕಲ್ಲಡ್ಕ (ಬಂಟ್ವಾಳ, ದಕ್ಷಿಣ ಕನ್ನಡ), ಆದಿತ್ಯ ಹೆಗಡೆ (ಉಡುಪಿ), ಐಶ್ವರ್ಯ ಜೋಗಿ (ಹೆಬ್ರಿ, ಉಡುಪಿ) ಮತ್ತು ಭೂಮಿಕಾ ಹೆಗಡೆ (ಮಂಗಳೂರು, ದಕ್ಷಿಣ ಕನ್ನಡ) ಸೆಮಿಫೈನಲ್ ಹಂತದಲ್ಲಿ ಎಲಿಮಿನೇಟ್ ಆದ ಸ್ಪರ್ಧಾಳುಗಳಾಗಿದ್ದು, ಸೆಮಿಫೈನಲ್ ಹಂತದ ವರೆಗೆ ತಮ್ನ ಯಶಸ್ವಿ ಸಂಗೀತ ಪ್ರದರ್ಶನ ವನ್ನು ನೀಡಿ ವೀಕ್ಷಕರ ಮನಗೆದ್ದಿದ್ದರು.
ಪ್ರಸಿದ್ಧ ಪ್ಲೇಬ್ಯಾಕ್ ಗಾಯಕ ಯಶವಂತ್ ಎಂ. ಜಿ. ಅವರು ದಾಯ್ಜಿವರ್ಲ್ಡ್ ಸ್ವರ ಸಾಗರದ ಎಲ್ಲಾ ಸುತ್ತುಗಳಿಗೆ ಪ್ರಧಾನ ತೀರ್ಪುಗಾರರಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಕಾರ್ಯಕ್ರಮವನ್ನು ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ ಪ್ರಸ್ತುತಪಡಿಸಿದ್ದು, ಆಭರಣ ಜುವೆಲ್ಲರ್ಸ್, ಫ್ಯಾಮಿಲಿ ಫ್ಯಾಷನ್, ಪಿಂಕಿ ಫ್ಯಾಷನ್ ಮತ್ತು ರೋಡ್ರಿಗಸ್ ಕೇಟರರ್ಸ್ ಸಾಸ್ತಾನ ಸಹ ಪ್ರಾಯೋಜಕರಾಗಿದ್ದಾರೆ. ಕಾರ್ಯಕ್ರಮವನ್ನು ಉತ್ಸಾಹಭರಿತ ನಿರೂಪಕ ಆಲ್ವಿನ್ ಅಂದ್ರಾದೆ ನಿರ್ವಹಿಸುತ್ತಿದ್ದಾರೆ.
ಪ್ರೇಕ್ಷಕರು ಶೀಘ್ರದಲ್ಲೇ ತಮ್ಮ ಪ್ರಿಯ ಗಾಯಕರಿಗೆ ವೋಟ್ ಮೂಲಕ ಬೆಂಬಲ ನೀಡುವ ಅವಕಾಶವನ್ನು ಪಡೆಯಲಿದ್ದಾರೆ. ಈ ಸ್ಪರ್ಧೆಯ ತನಿಷ್ಕ್ ಜುವೆಲ್ಲರಿ ಉಡುಪಿ ದಾಯ್ಜಿವಲ್ಡ್ ಸ್ವರ ಸಾಗರ – ಪಬ್ಲಿಕ್ ಚಾಯ್ಸ್ ಸಿಂಗರ್ ವಿಭಾಗದ ವಿವರಗಳು ಶೀಘ್ರದಲ್ಲೇ ಪ್ರಕಟಗೊಳ್ಳಲಿವೆ.
ದಾಯ್ಜಿವರ್ಲ್ಡ್ ಸ್ವರ ಸಾಗರ ಗ್ರ್ಯಾಂಡ್ ಫಿನಾಲೆ ನವೆಂಬರ್ 9 ರಂದು ಮಧ್ಯಾಹ್ನ 2 ಗಂಟೆಯಿಂದ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆ, ಉಡುಪಿಯಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿವೆ.
ದಾಯ್ಜಿವರ್ಲ್ಡ್ ಸ್ವರ ಸಾಗರ ಶೋನ ಎಲ್ಲಾ ಎಪಿಸೋಡ್ಗಳನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
https://www.youtube.com/playlist?list=PLUbSzAGYq89NSnl9vQ4hrN0chlhdlINuw