ಪುತ್ತೂರು: ಅ. 20 (DaijiworldNews/AK): ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಜೊತೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಯಾಗಿ, ಮನೆಯಲ್ಲಿದ್ದ ಮಗು ಸಹಿತ ಐದು ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ಪುತ್ತೂರು ನರಿಮೊಗ್ರು ಗ್ರಾಮದ ಬೆದ್ರಾಳದಲ್ಲಿ ನಡೆದಿದೆ.


ಬೆದ್ರಾಳ ನಿವಾಸಿ ದಯಾನಂದ ಮೂಲ್ಯ ಅವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಹಂಚಿನ ಛಾವಣಿ ಸಂಪೂರ್ಣ ಹಾನಿಯಾಗಿದೆ. ಗೋಡೆ ಕುಸಿತಗೊಂಡಿದ್ದು, ಒಂದು ಭಾಗಕ್ಕೆ ಹಾಕಿದ್ದ ಸಿಮೆಂಟ್ ಶೀಟ್ ಹಾನಿಯಾಗಿದೆ.
ಮನೆ ಮಂದಿಗೆ ಹೆಂಚಿನ ತುಂಡುಗಳು ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.