ಮಂಗಳೂರು, ಅ. 22 (DaijiworldNews/ TA): ಕೂಳೂರಿನ ನದಿಗೆ ಕಿಡಿಗೇಡಿಗಳು ಆಸ್ಪತ್ರೆ ತ್ಯಾಜ್ಯ ಎಸೆಯುತ್ತಿದ್ದು, ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ಸಮಯದಿಂದ ಲಾರಿಯಲ್ಲಿ ತಂದು ಡಂಪ್ ಮಾಡಲಾಗುತ್ತಿದೆ ಎನ್ನಲಾಗಿದೆ.


ಅದೂ ಅಲ್ಲದೆ ಹಲವು ಬಾರಿ ಊರಿನ ನಾಗರಿಕರು ಲಾರಿ ತಡೆದರೂ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪ ಕೂಡ ವ್ಯಕ್ತವಾಗಿದೆ. ಆಸ್ಪತ್ರೆ ಸಿರಿಂಜ್, ಇನ್ನಿತರೆ ತ್ಯಾಜ್ಯ ನದಿಯ ಒಡಲು ಸೇರುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಕ್ರಮ ಜರುಗಿಸುವಂತೆ ಕೂಳೂರು ನಾಗರಿಕರು ಒತ್ತಾಯಿಸಿದ್ದಾರೆ.