ಮಂಗಳೂರು, ಅ. 24 (DaijiworldNews/ TA): ಪಟಾಕಿ ಅಂಗಡಿ ಮಾಲಕರಿಂದ ಹಣ ವಸೂಲಿ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಾಚು ಹಾಗೂ ಅಶ್ವಿತ್ ಎಂದು ಗುರುತಿಸಲಾಗಿದೆ. ಬಜ್ಪೆಯ ಪಟಾಕಿ ಅಂಗಡಿ ಮಾಲಕ ದಾಮೋದರ್ ಅವರ ಅಂಗಡಿಗೆ ಆರೋಪಿಗಳು ಬಂದು, ಬೆದರಿಕೆ ಹಾಕಿ ಹಣ ಕಸಿಯಲು ಯತ್ನಿಸಿದರೆಂದು ಆರೋಪಿಸಲಾಗಿದೆ.
ಆರೋಪಿಗಳ ಭಯದಿಂದ ಪ್ರಾರಂಭದಲ್ಲಿ ದೂರು ನೀಡದ ದಾಮೋದರ್, ಬಳಿಕ ಪೊಲೀಸರ ರಕ್ಷಣಾ ಭರವಸೆ ಪಡೆದ ನಂತರ ದೂರು ಸಲ್ಲಿಸಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.