ಉಡುಪಿ, ಅ. 24 (DaijiworldNews/ TA): ಕಡಿಯಾಳಿ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗುವ ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಉಡುಪಿ ಶಾಖೆ ಮಳಿಗೆಯ ಶಿಲಾನ್ಯಾಸವನ್ನು ಶುಕ್ರವಾರದಂದು ನೆರವೇರಿಸಲಾಯಿತು. ವೇದಮೂರ್ತಿ ಯೋಗೀಶ್ ಭಟ್ ಮಂಗಳೂರು ಇವರ ತಂಡ ಮತ್ತು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ಪೂಜಾ ಕಾರ್ಯಕ್ರಮಗಳು ಹಾಗೂ ಶ್ರೀ ಕಾಶಿ ಮಠಾಧೀಶರಾದ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಶಿಲಾನ್ಯಾಸವನ್ನು ನೆರವೇರಿಸಿದರು.





ಶಿಲನ್ಯಾಸವನ್ನು ನೆರೆವೇರಿಸಿ ಸ್ವಾಮೀಜಿಯವರು ಮಾತನಾಡಿ ಇಂದಿನ ಸಮಾಜದಲ್ಲಿ ವ್ಯಾಪಾರದಲ್ಲಿ ಅಭಿವೃದ್ದಿಯಾಗಬೇಕಾದರೆ ಜನರ ವಿಶ್ವಾಸವನ್ನು ಗಳಿಸಬೇಕು.ಜನರ ಪ್ರೀತಿಯನ್ನು ಗೆಲ್ಲಬೇಕು ಎಂದು ಶುಭಾಶಿರ್ವಚನವನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಬೆಳ್ಳಿಯ ಪೀಠವನ್ನು ಕಾಶಿ ಮಠದ ಮಹಾ ಸಂಸ್ಥಾನಕ್ಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ , ಶ್ರೀಮತಿ ಲಕ್ಷ್ಮೀ ಮತ್ತು ಮಧುಕರ್ ಕಾಮತ್, ಶ್ರೀಮತಿ ಪ್ರೀತಿ ಮತ್ತು ಡಾ. ಪ್ರತಾಪ್ ಮಧುಕರ್ ಕಾಮತ್, ಸಂಯುಕ್ತಾ , ಸರಯು, ಶಿವಪ್ರತಾಪ್, ಬೋಳಾ ದಾಮೋದರ ಕಾಮತ್, ಬೋಳ ಪ್ರಭಾಕರ ಕಾಮತ್, ಕುಟುಂಬಸ್ಥರು, ಅತಿಥಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.