ಸುಳ್ಯ, ಅ. 25(DaijiworldNews/ TA): ಆ್ಯಪೊಂದರ ಮೂಲಕ ಪರಿಚಯವಾದ ವ್ಯಕ್ತಿ ತಿಳಿಸಿದಂತೆ ಕ್ರಿಪ್ಟೋ ಕರೆನ್ಸಿ ಇನ್ವೆಸ್ಟ್ಮೆಂಟ್ ಆ್ಯಂಡ್ ಟ್ರೇಡಿಂಗ್ ಹೆಸರಲ್ಲಿ ಸುಳ್ಯದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯದ ಕೆರೆಮೂಲೆಯ 50 ವರ್ಷದ ವ್ಯಕ್ತಿ ವಂಚನೆಗೊಳಗಾದವರು. ಇವರು ಮೊಬೈಲ್ನಲ್ಲಿ ಚಾಟ್ಜಿಪಿಟಿ ಮೂಲಕ ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಅದರ ಮೂಲಕ ಇಶಾ ಸಿಂಗ್ ಎಂಬವರ ಪರಿಚಯವಾಗಿ ಬಳಿಕ ಟೆಲಿಗ್ರಾಂ ಚಾಟ್ ಮಾಡಿಕೊಂಡಿದ್ದರು. ಈ ವೇಳೆ ಇಶಾ ಸಿಂಗ್ ಕ್ರಿಪ್ಟೋ ಕರೆನ್ಸಿ ಇನ್ವೆಸ್ಟ್ಮೆಂಟ್ ಆ್ಯಂಡ್ ಟ್ರೇಡಿಂಗ್ ಮಾಡಲು ತಿಳಿಸಿದ್ದು, ಅದರಂತೆ ದೂರುದಾರರು ಹಂತಹಂತವಾಗಿ ಒಟ್ಟು.2,90,000 ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.