ಮಂಗಳೂರು, ಅ. 30(DaijiworldNews/ AK):ಬಿಸಿಲೆ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಗಾಯಾಳುಗಳನ್ನು ಸಾಗಿಸುತ್ತಿದ್ದ ಅಂಬುಲನ್ಸ್ ಗೆ ಅಡ್ಡಬಂದು ಸ್ಕೂಟಿ ಸವಾರ ಹುಚ್ಚಾಟ ಮೆರೆದ ಘಟನೆ ನಡೆದಿದೆ.

ಬಿಸಿಲೆ ಘಾಟ್ ನಲ್ಲಿ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ. ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಸಾಗಿಸುವ ಮಧ್ಯೆ ಬಿಸಿ ರೋಡ್ ಬಳಿ ಸ್ಕೂಟಿ ಸವಾರನೊಬ್ಬ ಅಂಬುಲನ್ಸ್ ಗೆ ದಾರಿ ಮಾಡಿಕೊಡದೆ ಸುಮಾರು 4 ಕಿ,ಮೀ,ಸತಾಯಿಸಿದ್ದಾನೆ.
ಅಂಬುಲನ್ಸ್ ಚಾಲಕ ಹೋರ್ನ್ ಹಾಕಿದರೂ ಸೈರನ್ ಶಬ್ದವಿದ್ದರೂ ಸ್ಕೂಟಿ ಸವಾರ ದಾರಿ ಬಿಟ್ಟುಕೊಡಲಿಲ್ಲ,ಸ್ಕೂಟಿ ಸವಾರನ ಹುಚ್ಚಾಟವನ್ನು ಸಹಚಾಲಕ ಕಾರ್ತಿಕ್ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ದೂರು ನೀಡಲು ನಿರ್ಧರಿಸಿದ್ದಾರೆ.