ಕಾರ್ಕಳ, ನ. 01 (DaijiworldNews/AA): ರಸ್ತೆ ವಿಭಾಜಕದ ಕಬ್ಬಿಣದ ಗ್ರಿಲ್ಲಿಗೆ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾ.ಹೆ 169 ಮುರತಂಗಡಿ ಪರಿಸರದ ಶ್ರೀ ಬಾಲಾಂಜನೇಯ ಯುವಕ ಸಂಘದ ಆಟದ ಮೈದಾನದ ಎದುರು ಅಕ್ಟೋಬರ್ 31 ರಂದು ಸಂಜೆ ಸುಮಾರು 6:45 ರ ವೇಳೆಗೆ ನಡೆದಿದೆ.

ಮೂಡಬಿದ್ರೆಯಿಂದ ಬರುತ್ತಿದ್ದ ರಿಕ್ಷಾ ರಸ್ತೆ ವಿಭಾಜಕಕ್ಕೆ ಹೊಡೆದ ಪರಿಣಾಮ ರಿಕ್ಷಾ ನುಜ್ಜು ಗುಜ್ಜಾಗಿದ್ದು, ರಿಕ್ಷಾ ಚಾಲಕ ಆನೆಕೆರೆ ರಿಕ್ಷಾ ಗ್ಯಾರೇಜ್ ನ ಮಾಲಕರಾದ ಚಿತ್ರಾಕ್ಷ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಸಾಣೂರಿನ ಖಾಸಗಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಾತ್ರಿ ವಾಹನಗಳು ಚಲಿಸುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೈವರ್ಶನ್ ಬಳಿ ರಿಫ್ಲೆಕ್ಟರ್ ಅಥವಾ ಬ್ಲಿಂಕರ್ಗಳನ್ನು ಅಳವಡಿಸದೇ ಇರುವುದರಿಂದ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿರುತ್ತವೆ.
ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಕೂಡಲೇ ಎಚ್ಚೆತ್ತು ವಾಹನಗಳ ಸುರಕ್ಷತೆಗಾಗಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಹೆದ್ದಾರಿ ಇಲಾಖೆಯವರಿಗೆ ಎಚ್ಚರಿಸಿರುತ್ತಾರೆ.